www.karnatakatv.net: ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ ಜೊತೆ ಜೊತೆಗೆ ಸಿಲಿಂಡರ್ ಗಳ ಬೆಲೆ ಕೂಡಾ ಮುಂದಿನ ತಿಂಗಳು ಏರಿಕೆಯಾಗುವ ನಿರೀಕ್ಷೆಯಿದೆ.
ಹೌದು..ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನoತಹ ಕಂಪನಿಗಳು ನಷ್ಟದ ಹಿನ್ನಲೆ ಮತ್ತೊಮ್ಮೆ ಬೆಲೆ ಏರಿಕೆ ಮಾಡಲು ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದು, ಇದಾದ ಕೂಡಲೇ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಆಗಲಿದೆ. ಈ ಬಾರಿ ಏರಿಕೆಯಾದರೆ ಸುಮಾರು 90 ರೂ ಏರಿಕೆ ಕಾಣಲಿದೆ. ಈ ಮೂಲಕ 1000 ಗಡಿ ದಾಟಲಿದೆ ಎನ್ನಲಾಗಿದೆ. ಪ್ರಸ್ತುತ ಸಿಲಿಂಡರ್ ದರ 902 ಇದೆ. ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮತ್ತು ಚಿಲ್ಲರೆ ಮಾರಾಟದ ಬೆಲೆಯ ನಡುವಿನ ವ್ಯತ್ಯಾಸ ಇದ್ದು, ನಷ್ಟವನ್ನು ಸರಿದೂಗಿಸಲು ಸರಕಾರ ಇದುವರೆಗೂ ಯಾವುದೇ ಅನುದಾನವನ್ನು ಮಂಜೂರು ಮಾಡಿಲ್ಲ ಈ ಹಿನ್ನಲೆ ಈ ಏರಿಕೆ ಅನಿವಾರ್ಯವಾಗಿದೆ ಎಂದು ಪೆಟ್ರೋಲಿಯಂ ಸಂಸ್ಥೆಗಳು ತಿಳಿಸಿವೆ.
ಕಂಪನಿಗಳು ದರ ಹೆಚ್ಚಳವು ಸರ್ಕಾರದ ಅನುಮತಿಯನ್ನು ಅವಲಂಬಿಸಿದೆ. ಸರ್ಕಾರ ಒಪ್ಪಿಗೆ ನೀಡಿದರೆ, ಇದು ಎಲ್ಲಾ ವರ್ಗಗಳಲ್ಲಿ ಅಡುಗೆ ಅನಿಲ ದರಗಳಲ್ಲಿ ಐದನೇ ಬಾರಿಆಗಲಿದೆ ಎಲ್‌ಪಿಜಿ ದರವನ್ನು ಕಡೆಯದಾಗಿ ಅಕ್ಟೋಬರ್ 6 ರಂದು ಪ್ರತಿ ಸಿಲಿಂಡರ್‌ಗೆ 15 ರೂ.ಗಳಷ್ಟು ಹೆಚ್ಚಿಸಲಾಗಿತ್ತು.ಸಬ್ಸಿಡಿಯಲ್ಲಿ ಸರ್ಕಾರವು ಉಜ್ವಲ ಯೋಜನೆಯಡಿ ಒಂದು ವರ್ಷದಲ್ಲಿ ಕೇವಲ 12 ಸಿಲಿಂಡರ್‌ಗಳನ್ನು ಕುಟುಂಬಕ್ಕೆ ನೀಡುತ್ತದೆ. ಸಾಮಾನ್ಯ ಕುಟುಂಬ ವರ್ಗಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಳೆದ ವರ್ಷ ತೆಗೆದು ಹಾಕಲಾಗಿದೆ.