ಮುಂಬೈ:ವೇಗಿ ಆವೇಶ್ ಖಾನ್ ಅವರ ಆವೇಶಭರಿತ ಬೌಲಿಂಗ್ ದಾಳಿಯ ನೆರೆವಿನಿಂದ ಲಕ್ನೊ ಸೂಪರ್ ಜೈಂಟ್ಸ್ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ 12 ರನ್‍ಗಳ ರೋಚಕ ಗೆಲುವು ದಾಖಲಿಸಿದೆ.
ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‍ರೈಸರ್ಸ್ ಹೈದ್ರಾಬಾದ್ ಫಿಲ್ಡಿಂಗ್ ಆಯ್ದುಕೊಂಡಿತು. ಲಕ್ನೋ ಪರ ನಾಯಕ ಕೆ.ಎಲ್.ರಾಹುಲ್ 68, ಕ್ವಿಂಟಾನ್ ಡಿ ಕಾಕ್ 1, ಎವಿನ್ ಲಿವೀಸ್ 1, ಮನೀಶ್ ಪಾಂಡೆ 11, ದೀಪಕ್ ಹೂಡಾ 51, ಆಯುಷ್ ಬದೊನಿ 19, ಕೃಣಾಲ್ ಪಾಂಡ್ಯ 6, ಜಾಸನ್ ಹೋಲ್ಡರ್ ಅಜೇಯ 8 ರನ್ ಗಳಿಸಿದರು. ಲಕ್ನೊ ತಂಡ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
170 ರನ್‍ಗಳ ಗುರಿ ಬೆನ್ನತ್ತಿದ ಸನ್‍ರೈಸರ್ಸ್, ಉತ್ತಮ ಆರಂಭ ನೀಡುವಲ್ಲಿ ಎಡವಿತು. ಅಭಿಷೇಕ್ ಶರ್ಮಾ 13, ಕೇನ್ ವಿಲಿಯಮ್ಸನ್ 16, ರಾಹುಲ್ ತ್ರಿಪಾಠಿ 44, ಏಡಿನ್ ಮಾರ್ಕ್‍ರಾಮ್ 12,ನಿಕೊಲೊಸ್ ಪೂರಾನ್ 34, ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿದರು.
ಸನ್‍ರೈಸರ್ಸ್ ನಿಗದಿತ 20 ಓವರ್‍ಗಳಲ್ಲಿ 157 ರನ್‍ಗಳಿಸುವಲ್ಲಿ ಮಾತ್ರ ಶಕ್ತವಾಯಿತು. 12 ರನ್‍ಗಳ ವಿರೋಚಿತ ಸೋಲು ಅನುಭವಿಸಿತು. ಸತತ ಎರಡು ಸೋಲುಗಳೊಂದಿಗೆ ಸನ್‍ರೈರ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ.