ದೆಹಲಿ: ಪಂಜಾಬ್ ನ ಲುಧಿಯಾನ ಕೋರ್ಟ್ ಕಟ್ಟಡ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಗ್ರ ಹರ್ ಪ್ರೀತ್ ಸಿಂಗ್ ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರ ಹರ್ ಪ್ರೀತ್ ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ. ಲುಧಿಯಾನ ಕೋರ್ಟ್ ಬಾಂಬ್ ಸ್ಫೋಟದ ಹಿಂದಿನ ಪ್ರಮುಖ ಸಂಚುಕೋರ ಹರ್ ಪ್ರೀತ್ ನನ್ನು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ.
ಗಾಯಕ,ರಾಜಕಾರಣಿ ಮೂಸ್ ವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್ ಬಂಧನ
2021 ಡಿಸೆಂಬರ್ ನಲ್ಲಿ ಸಂಭವಿಸಿದ ಲುಧಿಯಾನ್ ಸ್ಪೋಟದಲ್ಲಿ ಓರ್ವ ಮೃತಪಟ್ಟು ಇನ್ನು 6 ಜನ ಗಾಯಗೊಂಡಿದ್ದರು. ಲುಧಿಯಾನಾ ಸ್ಫೋಟ ಪ್ರಕರಣದಲ್ಲಿ ಹರ್ ಪ್ರೀತ್ ಪ್ರಮುಖ ಸಂಚುಕೋರ. ಈ ಘಟನೆ ನಂತರ ತಲೆಮರೆಸಿಕೊಂಡಿದ್ದ ಹರ್ ಪ್ರೀತ್ ನನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹರ್ ಪ್ರೀತ್ ನನ್ನು ಕೌಲಾಲಂಪುರದಿಂದ ವಿಮಾನ ನಿಲ್ದಾಣಕ್ಕೆ ಬಂದ ನಂತರ ಬಂಧಿಸಲಾಯಿತು ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.




