Tuesday, August 5, 2025

Latest Posts

ಅಕ್ಟೋಬರ್ 21 ರಿಂದ ಬಿಸಿಯೂಟ ಪ್ರಾರಂಭ..!

- Advertisement -

www.karnatakatv.net :ಬೆಂಗಳೂರು: ಅಕ್ಟೋಬರ್ 20 ರವರೆಗೆ ಎಲ್ಲಾ ಶಾಲೆಗಳಿಗೂ ದಸರಾ ರಜೆಯನ್ನು ಕೊಡಲಾಗಿದ್ದು, ಅ.21 ರಿಂದ ಬಿಸಿಯೂಟವನ್ನು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಹೌದು..ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಈ ಪರೀಕ್ಷೆಗೆ ಹಾಜರಾಗಿದ್ದಂತ 53,155 ವಿದ್ಯಾರ್ಥಿಗಳಲ್ಲಿ 29,522 ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗೇ ಶಾಲೆಯ ಬಿಸಿಯೂಟ ದ ಬಗ್ಗೆ ಚರ್ಚೆ ನಡೆದ ಬಳಿಕ ಅಕ್ಟೋಬರ್ 21 ರಂದು ಬಿಸಿಯೂಟವನ್ನು ಪುನರಾರಂಭಿಸಲು ಸೂಚಿಸಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1 ರಿಂದ 5 ನೇ ತರಗತಿಗಳ ಆರಂಭದ ಬಗ್ಗೆಯೂ ಚರ್ಚಿಸಿ ದಸರಾ ನಂತರ ತಾಂತ್ರಿಕ ತಜ್ಞರ ಸಭೆ ನಡೆಯಲಿದ್ದು, ಶಾಲೆಗಳ ಆರಂಭ ಕುರಿತಂತೆ ಚರ್ಚಿಸಲಾಗುತ್ತದೆ. ಅಕ್ಟೋಬರ್ 20 ರ ವರೆಗೆ ದಸರಾ ರಜೆ ಇದೆ ಈ ಬಳಿಕ ಅ. 21 ರಿಂದ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗುತ್ತದೆ. 10ನೇ ತರಗತಿವರೆಗೆ ಬಿಸಿಯೂಟ ನೀಡಲಾಗುತ್ತದೆ ಎಂದರು.

ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss