ಮಂಡ್ಯದಲ್ಲಿ ಕನ್ನಂಬಾಡಿ ಕಟ್ಟೆ ಉಳಿಸಿ ಹೋರಾಟ ಭುಗಿಲೆದ್ದಿದೆ. ಕನ್ನಂಬಾಡಿ ಕಟ್ಟೆ ಬಳಿ ಅಮ್ಯೂಸ್ ಮೆಂಟ್ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಹಲವು ಸಂಘಟನೆಗಳು ಜೊತೆಯಾಗಿದ್ದು, ಹೋರಾಟಕ್ಕೆ ಧುಮುಕುವ ಲಕ್ಷಣಗಳು ಕಾಣಿಸ್ತಿವೆ.
ಮಂಡ್ಯದ ಗಾಂಧಿ ಭವನದಲ್ಲಿ ‘ಕನ್ನಂಬಾಡಿ ಕಟ್ಟೆ ಉಳಿಸಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ರೈತ ಸಂಘಟನೆಗಳು, ದಲಿತ-ಕಾರ್ಮಿಕ-ಕನ್ನಡಪುರ ಮತ್ತು ಮಹಿಳಾ-ಪ್ರತಿಪರ ಸಂಘಟನೆಗಳು ಭಾಗಿಯಾಗಿದ್ವು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಕೀಲ ಎಂ. ಶಿವಪ್ರಕಾಶ್, ರಾಜ್ಯ ಸರ್ಕಾರದ ವಿರುದ್ಧ, ವಾಗ್ದಾಳಿ ನಡೆಸಿದ್ರು. ಜನರ ಉಪಯೋಗಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆ ನಿರ್ಮಿಸಿದ್ರು. ಇತಿಹಾಸ ಅರಿಯದವರು ಸಂರಕ್ಷಣೆ ಮಾಡುವ ಬದಲು, ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸಲು ಹೊರಟಿದ್ದಾರೆ.
ದೈವತ್ವ ಸ್ವರೂಪದ ಅಣೆಕಟ್ಟೆಗೆ ಧಕ್ಕೆ ತರುವ ಯೋಜನೆ ಮಾಡಲು ಹೊರಟವರಿಗೆ ದೇವರು ಶಿಕ್ಷೆ ಕೊಡುತ್ತಾನೆ. ಇತಿಹಾಸ ಓದದವರು, ಮೋಜು ಮಸ್ತಿ ಮಾಡಲು ಮಾಡಲು ಪಾರ್ಕ್ ಹೆಸರಿನಲ್ಲಿ ಅಭಿವೃದ್ಧಿಗೆ ಮುಂದಾಗುತ್ತಾರೆ. ಖಾಸಗಿಯವರಿಗೆ ಅನುಕೂಲ ಮಾಡಿಕೊಡಿವ ಉದ್ದೇಶ, ಯಾರೂ ಕೇಳದಿದ್ದರೂ ಕಾವೇರಿ ಆರತಿ ಮಾಡಬೇಕೆಂದುಕೊಂಡಿದ್ದಾರೆ ಅಂತಾ ಕಿಡಿಕಾರಿದ್ರು.
ಅಮ್ಯೂಸ್ ಮೆಂಟ್ ಪಾರ್ಕ್ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಾಯಿ ಬಿಡುತ್ತಿಲ್ಲ. ಕೆ.ಆರ್.ಎಸ್ ಭಾಗದ 6 ಗ್ರಾಮ ಪಂಚಾಯಿತಿಗಳೇ ವಿರೋಧಿಸುತ್ತಿವೆ. ಹೀಗಂತ
ಜಿಲ್ಲಾ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಜಯರಾಂ ಕುಟುಕಿದ್ರು.