Friday, December 27, 2024

Latest Posts

ಮುಖ್ಯಮಂತ್ರಿಗಳೆ ಕ್ಷಮೆ ಕೇಳಿ ಪಾದ ತೊಳೆದರು

- Advertisement -

ಮಧ್ಯಪ್ರದೇಶ: ಕಳೆದ ಎರಡು ವಾರಗಳ ಹಿಂದೆ ಮಧ್ಯಪ್ರದೇಶದ ಕುದ್ರಿ ಗ್ರಾಮದಲ್ಲಿ  ಬಿಜೆಪಿ ಸದಸ್ಯನ ಅಸಭ್ಯ ವರ್ತನೆ ನಡೆಸಿದ್ದಾನೆ.  ರಸ್ತೆಯ ಪಕ್ಕದಲ್ಲಿ ಕುಳಿತಿರುವ ಆದಿವಾಸಿ ಕಾರ್ಮಿಕ ದಶಮತ್ ರಾವತ್ ಮೇಲೆ ಪ್ರವೇಶ್ ಶುಕ್ಲಾ ಎನ್ನುವ  ಬಿಜೆಪಿ ನಾಯಕ ಮೂತ್ರ ವಿಸರ್ಜನೆ ಮಾಡಿದ್ದನ್ನು ವಿರೋಧಿಸಿ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು.

ಈಗ ಆ ಆರೋಪಿಯನ್ನು ಬಂದಿಸಿದ ಬೆನ್ನಲ್ಲೆ ಅವನಿಗೆ ಸೆಕ್ಷನ್ 294 (ಅಸಭ್ಯ ವರ್ತನೆ) 504 (ಉದ್ದೇಶ ಪೂರ್ವಕ ಅವಹೇಳನ )ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತಿದೆ. ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಜುಲತಾ ಪಟ್ಲಾ ತಿಳೀಸಿದ್ದಾರೆ.

ಈ ಘಟನೆ ತಿಳಿದ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ್ ಸೀಂಗ್ ಚೌಹಾಣ್ ಅವರು ದಶಮತ್ ರಾವತ್ ಅವರನ್ನು ಕಛೇರಿಗೆ ಕರೆಸಿ ಕುರ್ಚಿಯ ಮೇಲೆ ಕೂರಿಸಿ ಪಾದ ತೊಳೆದು ಘಟನೆ ನಡೆದಿರುವುದಕ್ಕೆ ಕ್ಷಮೆ ಕೇಳಿದ್ದಾರೆ.ನಂತರ ಆತನನ್ನು ಭೋಪಾಲ್ ನ ಸ್ಮಾರ್ಟ ಸಿಟಿಗೆ ಕರೆದುಕೊಂಡು ಹೋಗಿ ದಶಮತ್ ರಾವತ್ ಅವರಿಂದ ಸಸಿ ನಡೆಸಿದ್ದಾರೆ.

- Advertisement -

Latest Posts

Don't Miss