ಮಂಡ್ಯ: ಸಿಂಧುಶ್ರೀ ಎಂಬ ಮಹಿಳೆ ಐದು ತಿಂಗಳ ಗರ್ಭಿಣಿ ಆಗಿದ್ದಾಗ ಮದ್ದೂರಿನ ಡಿ2 ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಅವರಿಗೆ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ನಡೆಸಿದ ಸಿಬ್ಬಂದಿ ಮಗುವಿಗೆ ಯಾವುದೇ ಖಾಯಿಲೆ ಇಲ್ಲವೆಂದು ವರದಿ ನೀಡಿತ್ತು. ಆದರೆ ಮಗು ಜನಿಸಿದ ಬಳಿಕ ಮಗುವಿಗೆ ಡೌನ್ ಸಿಂಡ್ರೊಮ್ ಎಂಬ ಕಾಯಿಲೆ ಹಾಗೂ ಹೃದಯದಲ್ಲಿ ಮೂರು ಹೋಲ್ ಇರೋದು ತಿಳಿದು ಬಂದಿದೆ ಎಂದು ಸಿಂಧುಶ್ರೀ ಅವರ ತಾಯಿ ಹೇಳಿದ್ದಾರೆ.
ಇನ್ನು ಮಗು ರುಚಿತ ಜನಿಸಿದ ನಂತರ ಹೃದಯದಲ್ಲಿ ಮೂರು ಹೋಲ್ ಗಳಿದ್ದು ಜೊತೆಗೆ ಡೌನ್ ಸಿಂಡ್ರೋಮ್ ಎಂಬ ಖಾಯಿಲೆ ಇರೋದು ಸ್ಪಷ್ಟವಾಗಿದೆ. ಈ ಕುರಿತು ಪೋಷಕರಾದ ಮಹೇಶ್ ಹಾಗೂ ಸಿಂಧುಶ್ರಿ ಗ್ರಾಹಕರ ವೇದಿಕೆ ಕೋರ್ಟ್ ಗೆ ಹೋಗಿದ್ದಾರೆ. ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಡಿ2 ಡಯಾಗ್ನೆಟಿಕ್ ಸೆಂಟರ್ ಗೆ 15 ಲಕ್ಷ ರೂಪಾಯಿ ದಂಡವನ್ನ ವಿಧಿಸಿ ಆದೇಶವನ್ನ ಹೊರಡಿಸಿದೆ. ಸದ್ಯ, ಮಾಡಿದ ಯಡವಟ್ಟಿಗೆ ಈಗ ಡಯಾಗ್ನೆಟಿಕ್ ಸೆಂಟರ್ ದಂಡ ಕಟ್ಟಬೇಕಾಗಿದೆ. ಡಯಾಗ್ನೆಟಿಕ್ ಸೆಂಟರ್ ಮಾಡಿದ ಯಡವಟ್ಟಿನಿಂದ ಒಂದು ಕುಟುಂಬ ನರಳುವಂತಾಗಿದೆ.
ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ