ನಮ್ಮ ಏರಿಯಾ ಮಿನಿ ಪಾಕಿಸ್ತಾನವಾದಂತಾಗಿದೆ. ಮಸೀದಿ ಮುಂಭಾಗ ನಮ್ಮನ್ನು ಓಡಾಡಲು ಬಿಡುವುದೇ ಇಲ್ಲ. ರಾತ್ರಿ ವೇಳೆ ಯುವಕರು ಮಚ್ಚು, ಲಾಂಗು ಹಿಡಿದು ಅಲೆದಾಡುತ್ತಾರೆ. ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನಮ್ಮ ಮನೆಯವರು ಸತ್ತರೂ ಶವದ ಮುಂದೆ ತಮಟೆ ಬಾರಿಸಲು ಬಿಡುವುದಿಲ್ಲ” ಎಂದು ಚನ್ನೇಗೌಡ ಬಡಾವಣೆಯ ಹಿಂದೂ ಮಹಿಳೆಯರು ಪೊಲೀಸರಿಗೆ ಅಳಲು ತೋಡಿಕೊಂಡರು.
ಮದ್ದೂರಿನಲ್ಲಿ ಭಾನುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಕಲ್ಲುತೂರಾಟ ನಡೆದಿತ್ತು. ಅದರ ಮುಂದಿನ ದಿನ ನಡೆದ ಪ್ರತಿಭಟನೆ ಮತ್ತು ಲಾಠಿಪ್ರಹಾರದಿಂದ ಪಟ್ಟಣದಲ್ಲಿ ಎರಡು ದಿನಗಳಿಂದ ಉದ್ವಿಗ್ನತೆ ಆವರಿಸಿತ್ತು. ಸೋಮವಾರ ಸಂಜೆ ಪರಿಸ್ಥಿತಿ ಮೇಲ್ನೋಟಕ್ಕೆ ಶಾಂತವಾಗಿದ್ರೂ, ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಮದ್ದೂರು ಶಾಸಕ ಕೆ.ಎಂ. ಉದಯ ಅವರು, ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ಸಮಯದಲ್ಲಿ ನಡೆದ ಈ ಅಹಿತಕರ ಘಟನೆ ಮನಸ್ಸಿಗೆ ನೋವು ತಂದಿದೆ. ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಇದರ ಹಿಂದೆ ಯಾರೇ ಇರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

