Sunday, March 3, 2024

Latest Posts

ಮ್ಯಾಜಿಕ್ ಮಾಡಲು ಹೋಗಿ ಮಸಣ ಸೇರಿದ..!

- Advertisement -

ಅಲ್ಲಿ ಸಾವಿರಾರು ಜನ ಕಾತರದಿಂದ ಕಾಯ್ತಿದ್ರು. ನೀರಿನ ಒಳಗೆ ಹೋಗಲು ಕೈಕಾಲು ಕಟ್ಟಿಸಿಕೊಂಡ ಆ ಜಾದೂಗಾರನ ಮುಖದಲ್ಲಿ ಎಲ್ಲರಿಗೆ ಮ್ಯಾಜಿಕ್ ತೋರಿಸ್ತೀನಿ ಅಂತ ಮಂದಹಾಸ ಬೀರುತ್ತಾ ನೀರಿನ ಒಳಗೆ ಹೋದ. ಆತನ ಕುಟುಂಬಸ್ಥರು ಮ್ಯಾಜಿಕ್ ಆಗುತ್ತೆ ಅನ್ನೋ ಭರವಸೆಯಲ್ಲೇ ಇದ್ರು. ಆದ್ರೆ ಸಾಧ್ಯವಾಗಲಿಲ್ಲ. ಒಂದೊಂದು ಸೆಕೆಂಡ್ ಕೂಡ ಅಲ್ಲಿದ್ದವರ ಎದೆಬಡಿತ ಹೆಚ್ಚಿಸುತ್ತಿತ್ತು. ಈಗ ಬಂದ ಆಗ ಬಂದ ಅಂತ ಎಲ್ಲರೂ ಜಾದೂಗಾರ ನೀರಿನ ಒಳಗೆ ಹೋದ ಜಾಗವನ್ನೇ ನೋಡ್ತಾಯಿದ್ರು. ಆದ್ರೆ ಆತ ನೀರಿನಿಂದ ಹೊರಬಂದಿದ್ದು ಮಾತ್ರ ಶವವಾಗಿ..!

ಪಶ್ವಿಮ ಬಂಗಾಳದ 40 ವರ್ಷದ ಲಹಿರಿ ಮ್ಯಾಜಿಕ್ ಮಾಡಲು ಹೋಗಿ ಮಸಣ ಸೇರಿದ್ದಾನೆ. ಜಾದೂಗಾರ್ ಮಾಂಡ್ರೇಕ್ ಅಂತಾನೇ ಫೇಮಸ್ ಆಗಿದ್ದ ಲಹಿರಿ ಹೂಗ್ಲಿ ನದಿಯಲ್ಲಿ ಮ್ಯಾಜಿಕ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಕಳೆದ 20 ವರ್ಷದ ಹಿಂದೆ ಲಹಿರಿ ಇದೇ ರೀತಿ ಕೈಕಾಲು ಕಟ್ಟಿಸಿಕೊಂಡು ನೀರಿನಲ್ಲಿ ಮುಳುಗಿ 29 ಸೆಜೆಣಟ್ ನಲ್ಲಿ ಮೇಲೆ ಬಂದಿದ್ರು. 2013ರಲ್ಲಿ ಸಾವಿರಾರು ಜನರ ಮುಂದೆ ಕೈಕಾಲುಗಳನ್ನು ಸರಪಳಿಯಿಂದ ಕಟ್ಟಿಸಿಕೊಂಡು ಗಾಜಿನ ಪೆಟ್ಟಿಯಲ್ಲಿ ಮಲಗಿ, ನಂತರ ನೀರಿನಲ್ಲಿದಿದ ಅದೇ ಗಾಜಿನ ಪೆಟ್ಟಿಗೆ ಹಿಂಬಾಗಿಲಿನಿಂದ ಹೊರ ಬಂದು ಜನರ ಕೈಗೆ ಸಿಕ್ಕಿಬಿದ್ದು ಹಲ್ಲೆಗೀಡಾಗಿದ್ರು. ಕಳೆದ ವರ್ಷ ನೀರಿನ ಮೇಲೆ ಹೆಜ್ಜೆ ಹಾಕುವ ಮ್ಯಾಜಿಕ್ ಪ್ರದರ್ಶನ ಮಾಡ್ತೀನಿ ಅಂತ ಹೋಗಿ ವಿಫಲವಾದಾಗ ಅಲ್ಲಿ ಸೇರಿದ್ದ ಜನ ಲಹಿರಿಗೆ ಏಟು ಕೊಟ್ಟಿದ್ರು.

ನೀರಿನ ಮುಳುಗುವ ಮುನ್ನ ಸಾವಿನ ಮಾತನಾಡಿದ್ದ ಲಹಿರಿ..!

ಇನ್ನು ನೀರಿನಲ್ಲಿ ಮುಳುಗುವ ಮುನ್ನ ನಾನು ವಾಪಸ್ ಬರ್ತೇನೆ, ಆದ್ರೆ ಈ ಬಾರಿ ಹೆಚ್ಚು ಗಟ್ಟಿಯಾಗಿ ಕೈಕಾಲು ಕಟ್ಟಿಸಿಕೊಂಡಿದ್ದೇನೆ ನನ್ನ ಜಾದೂ ವಿಫಲವಾದ್ರೆ ನಾನು ಅಲ್ಲಿಯೇ ಸಾಯಲೂಬಹುದು ಅಂತ ಲಹಿರಿ ಅಲ್ಲಿದ್ದವರಿಗೆ ಹೇಳಿ ನೀರಿನಲ್ಲಿ ಮುಳುಗಿದ್ರು. ನಂತರ ಅವರು ವಾಪಸ್ ಬಾರದಿದ್ದಾಗ ಕಾರ್ಯಾಚರಣೆಗಿಳಿದ ರಕ್ಷಣಾ ತಂಡ ಲಹಿರಿಯ ಮೃತ ದೇಹವನ್ನ ಹೊರತೆಗೆದಿದೆ. ಒಟ್ಟಾರೆ ಮ್ಯಾಜಿಕ್ ಮಾಡಿ ಮನರಂಜನೆ ನೀಡಲು ಹೊರಟ ಜಾದೂಗಾರ ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.

ಯಸ್ ವೀಕ್ಷಕರೇ ಈ ಡೇಂಜರಸ್ ಮ್ಯಾಜಿಕ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಾಮೆಂಟ್ ಮಾಡಿ.

ಸುಮಲತಾ v/s BTv.. ! ಯಾರದ್ದು ತಪ್ಪು, ಯಾರದ್ದು ಸರಿ…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=LEAHZSj6Sd8
- Advertisement -

Latest Posts

Don't Miss