ಹುಬ್ಬಳ್ಳಿ: ಮಹಾದಾಯಿ ಯೋಜನೆಗೆ ಇಲ್ಲಿಯವರೆಗೂ ನ್ಯಾಯ ದೊರಕಿಲ್ಲ. ಕಳೆದ ಸರ್ಕಾರವಿದ್ದಾಗಲು ರೈತರು ಹೋರಾಟ ಮಾಡಿದ್ದರು.ಆದರೆ ಬಿಜೆಪಿ ಸರ್ಕಾರ ಡಿಪಿಆರ್ ಗೆ ಅನುಮತಿ ನೀಡಿ ಕೈ ತೊಳೆದುಕೊಂಡಿತ್ತು. ಆದರೆ ಹಿಂದಿನ ಸರ್ಕಾರದಿಂದ ನ್ಯಾಯ ಸಿಕ್ಕಿರಲಿಲ್ಲ. ಹಾಗಾಗಿ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳತಕ್ಕೆ ಬಂದ ಬೆನ್ನಲ್ಲೆ ಮಹಾದಾಯಿ ಯೋಜನೆಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತರು ಹೋರಾಟ ನಡೆಸಲು ಮುಂದಾಗಿದ್ದಾರೆ.
ಮತ್ತೊಮ್ಮೆ ರಣ ಕಹಳೆ ಊದಲು ಆರಂಭಿಸಲು ಹೊರಟಿರುವ ಮಹಾದಾಯಿ ಯೋಜನೆ ಪರ ರೈತರು ಹೋರಾ ಮಾಡಲು ಮುಂದಾಗಿದ್ದಾರೆ ಸರ್ಕಾರಗಳೂ ಕಳಸಾ ಬಂಡೂರಿ ವಿಚಾರದಲ್ಲಿ ಕಾಳಜಿ ವಹಿಸುತಿಲ್ಲ ಈಗಾಗಲೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಮಹಾದಾಹಿ ತಾರ್ಕಕ ಅಂತ್ಯ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ.
ಮಹದಾಯಿ ಕಾಮಗಾರಿ ಆರಂಭಿಸಲು ಬೇಕಾಗಿದೆ ಅರಣ್ಯ ಇಲಾಖೆಯಿಂದ ಕ್ಲಿಯರನ್ಸ್.ಆದ್ರೆ ಡಿಪಿಆರ್‌ಗೆ ಅನುಮತಿ ನೀಡಿ ಕೈತೊಳೆದಕೊಂಡ ಬಿಜೆಪಿ ನಾಯಕರು.ಕೇಂದ್ರ ಸರ್ಕಾರ ಕಳಸಾ-ಬಂಡೂರಿ ವಿಚಾರದಲ್ಲಿ ಅಸಡ್ಯ ತೋರಿಸಿಬಾರದು.ಒಂದು ವೇಳೆ ಅಸಡ್ಯ ತೋರಿಸಿದ್ದೆ ಆದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಸಿ ಮುಟ್ಟಿಸಲು ಮುಂದಾದ ಹೋರಾಟಗಾರರು.
ಇದಕ್ಕಾಗಿ ಈಗಾಗಲೇ ವಾಟಾಳ್ ನಾಗರಾಜ್ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ರೈತರು. ವಾಟಾಳ ನಾಗರಾಜ್ ಜೊತೆಗೆ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ. ಮಹದಾಯಿಗಾಗಿ ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧಾರ. ಸಮಾವೇಶದ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ಕೊಡಲು ಮುಂದಾದ ಉತ್ತರ ಕರ್ನಾಟಕದ ಅನ್ನದಾತರು.
Rain effect- ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಿತ್ತು ಬಂದ ವಿದ್ಯುತ್ ಕಂಬ
Cheetha: ಚಿರತೆಯನ್ನು ತಾನೆ ಸೆರೆಹಿಡಿದ..! ಬೈಕ್ ಗೆ ಕಟ್ಟಿ ಕೊಂಡೊಯ್ದ..?!

