Friday, October 18, 2024

Latest Posts

ಕಾಂಗ್ರೆಸ್ ನವರು ದಾರಿ ತಪ್ಪಿಸ್ತಿದ್ದಾರೆ : ಹೆಚ್ಡಿಕೆ ಕುಹಕ

- Advertisement -

Congress VS Jds :  ಹುಬ್ಬಳ್ಳಿ : ಹಿಂದೆ ಮಹದಾಯಿ ನೀರಿಗಾಗಿ ಯಮನೂರು ರೈತರು ಪಾದಯಾತ್ರೆ ಮಾಡಿದಾಗ ಇದೇ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಮಹಿಳೆಯರು, ಕೂಲಿ ಕಾರ್ಮಿಕರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆಸಿ ಅವರೆಲ್ಲರನ್ನೂ ಬಳ್ಳಾರಿ, ಚಿತ್ರದುರ್ಗ ಜೈಲುಗಳಿಗೆ ಅಟ್ಟಲಾಯಿತು. ಈಗ ಇವರು ಮಹದಾಯಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸ್ವಲ್ಪವಾದರೂ ಆತ್ಮಸಾಕ್ಷಿ ಇದೆಯಾ ಎಂದು HD Kumaraswamy ಕುಮಾರಸ್ವಾಮಿ ಅವರು ಕಿಡಿ ಕಾರಿದರು.

 

ಹಿಂದೆ Congress ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊರಟರು. ಅದು ಕೃಷ್ಣೆಯ ನಾಡಿಗೆ ಆಂಧ್ರದ ಕಡೆಗೆ ಎನ್ನುವಂತೆ ಆಯಿತು. ಐದು ವರ್ಷ ಸರಕಾರ ಇದ್ದರೂ ಏನು ಮಾಡಲಿಲ್ಲ. ಈಗ ಮತ್ತೆ ಪಾದಯಾತ್ರೆ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು.

- Advertisement -

Latest Posts

Don't Miss