ಹುಬ್ಬಳ್ಳಿ: ಯಾವುದೇ ಚುನಾವಣೆ ಬಂದರೂ ಅಭ್ಯರ್ಥಿಗಳ ಪಾಲಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ಪ್ರಚಾರದ ಅಸ್ತ್ರ. ಯಾವುದೇ ಸರ್ಕಾರ ಬಂದರೂ ಹೋರಾಟಗಾರರಿಗೆ ಹಾಗೂ ಈ ಭಾಗದ ಜನರಿಗೆ ಮಾತ್ರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಆಗುತ್ತಿದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.
ಮಹದಾಯಿ ಕಿಚ್ಚು ಮತ್ತೆ ಹೊತ್ತುವುದು ನಿಶ್ಚಿತವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ನೀರಿನ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಹಾಗಿದ್ದರೇ ಈ ಬಾರಿ ಹೋರಾಟ ಮಾತ್ರ ಸಾಕಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಹೌದು..ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಹದಾಯಿ ಹೋರಾಟ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಕಳೆದ ಬಾರಿ ಹೋರಾಟಕ್ಕೆ ಸಿನಿಮಾರಂಗ ಮೊದಲು ಮಾಡಿ ಸಾಕಷ್ಟು ಬೆಂಬಲದೊಂದಿಗೆ ಹೋರಾಟ ನಡೆದಿತ್ತು. ಆದರೆ ಈಗ ಮತ್ತೊಮ್ಮೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಇದಕ್ಕೆ ಸಾಕ್ಷಿ ಎಂಬುವಂತೇ ಮಹದಾಯಿ ಮಹಾವೇದಿಕೆ ಹಾಗೂ ವಿವಿಧ ಸಂಘಟನೆಯ ಸಹಭಾಗಿತ್ವದಲ್ಲಿ ವಿನೂತನ ರೀತಿಯಲ್ಲಿ ಹೋರಾಟ ನಡೆಸಲಾಯಿತು. ಅಲ್ಲದೇ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಹುಬ್ಬಳ್ಳಿಯ ಕೇಂದ್ರ ಸಚಿವರ ಮನೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಹೋರಾಟಗಾರರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಲಾಯಿತು.
ಇನ್ನೂ ಈಗಾಗಲೇ ನ್ಯಾಯಾಧೀಕರಣ ತೀರ್ಪು ಬಂದು ಸುಮಾರು ದಿನಗಳೇ ಕಳೆದರೂ ಇದುವರೆಗೂ ಯಾವುದೇ ರೀತಿಯಲ್ಲಿ ಕಾಮಗಾರಿ ಆರಂಭಗೊಂಡಿಲ್ಲ. ಅಲ್ಲದೆ ಉತ್ತರ ಕರ್ನಾಟಕ ಹಲವಾರು ಬೇಡಿಕೆಗಳನ್ನು ಹೊತ್ತು ಭರವಸೆ ಕುದುರೆ ಹತ್ತಿ ಬರುವ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಜವಾಬ್ದಾರಿ ವಹಿಸದೇ ಕೈತೊಳೆದುಕೊಳ್ಳುತ್ತಿರುವುದು ಸಾಕಷ್ಟು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.ಮಹಾದಾಯಿ ಕಾಮಗಾರಿ ವಿಳಂಬವಾದಲ್ಲಿ ಮತ್ತೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಉ.ಕ ಅಭಿವೃದ್ಧಿ ಹಾಗೂ ಮಹಾದಾಯಿ ಯೋಜನೆ ಈ ತಿಂಗಳು ಒಳಗಾಗಿ ಪ್ರಾರಂಭ ಮಾಡಬೇಕು ಇಲ್ಲವಾದರೆ ಹೋರಾಟ ಶತಸಿದ್ಧ ಎಂದು ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ಮಹದಾಯಿಗಾಗಿ ಉತ್ತರ ಕರ್ನಾಟಕ ಭಾಗದ ಜನರು ಸಾಕಷ್ಟು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ನ್ಯಾಯಯುತವಾಗಿ ನೀರು ದೊರೆತಿಲ್ಲ. ಈ ಬಗ್ಗೆ ಆಳುವ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನರ ಬೇಡಿಕೆ ಈಡೇರಿಸಬೇಕಿದೆ.