ಹುಬ್ಬಳ್ಳಿ: ಮಹದಾಯಿ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಇಲ್ಲಿರುವ ರೈತರಿಗೆ ಇಲ್ಲಿಯವರೆಗೂ ಯಾವ ಸರ್ಕಾರಕ್ಕೂ ನ್ಯಾಯ ಒದಗಿಸುಲು ಸಮಯವಿರಲಿಲ್ಲ ಅನ್ನಿಸುತ್ತಿದೆ ಯಾಕೆಂದರೆ ಇಂದು ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ ಮಹದಾಯಿ ರೈತ ಹೋರಾಟಗಾರರೇ ಇದಕ್ಕೆ ಸಾಕ್ಷಿ
ಹೌದು ಇಂದು ಮಹದಾಯಿ ಪರ ರೈತ ಹೋರಾಟಗಾರರು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರ ಹುಬ್ಬಳ್ಳಿಯ ಮಥುರಾ ಎಸ್ಟೇಟ್ ನಲ್ಲಿರುವ ನಿವಾಸದ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈಗಾಗಲೆ ಹಲವು ವರ್ಷಗಳ ಹಿಂದೆಯೇ ಡಿಪಿಆರ್ ತಯಾರಾಗಿದ್ದರೂ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗದೆ ವಿಳಂಭವಾಗುತ್ತಿದೆ. ಮಹದಾಯಿ ಕುರಿತು ಇರುವ ತೊಡಕುಗಳನ್ನು ಆದಷ್ಟು ಬೇಗ ಸರಿಪಡಿಸಿ ಕೂಡಲೆ ಕಾಮಗಾರಿ ಪ್ರಾರಂಭಿಸಬೇಕೆಂದು ರೈತ ಹೋರಾಟಗಾರರು ಸಚಿವರ ಮನೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಇನ್ನು ಹೋರಾಟದ ಮುನ್ಸೂಚನೆ ಹೊಂದಿದ್ದ ಪೊಲೀಸರು ಸಚಿವರ ಮನೆ ಮುಂದೆ ಸಾಕಷ್ಟು ಬಿಗಿ ಬಂದೋ ಬಸ್ತ್ ನಿಯೋಜನೆ ಮಾಡಿದ್ದರು. ಈ ವೇಳೆ ಸಚಿವರ ಮನೆಗೆ ಮುತ್ತಿಗೆ ಹಾಕಲು ಹೋರಾಟಗಾರರು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ರೈತ ಪರ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ಇನ್ನು ಈ ಪ್ರತಿಭಟನೆಗೆ ಧಾರವಾಡ ಗದಗ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೋರಾಟಗಾರರು ಆಗಮಿಸಿದ್ದರು.
Gruha Laxmi ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Honors to ministers : ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ ನೂತನ ಸಚಿವರು, ಶಾಸಕರಿಗೆ ಸನ್ಮಾನ
MLA Vinay kulkarni : ಪತ್ನಿಯ ಸಲಹೆ, ಸೂಚನೆ ಮೂಲಕ ಅಭಿವೃದ್ಧಿ ಕೆಲಸ ಮಾಡಿಸುತ್ತಿರುವ ಶಾಸಕ ವಿನಯ ಕುಲಕರ್ಣಿ