ಬಿಹಾರದಲ್ಲಿ ಚುನಾವಣೆ ಕಣ ರಂಗೇರಿದೆ. ಇತ್ತ ಚುನಾವಣೆಗೂ ಮುನ್ನವೇ ಸಿಎಂ ಮತ್ತು ಡಿಸಿಎಂ ಅಭ್ಯರ್ಥಿಗಳನ್ನು ಮಹಾಘಟಬಂಧನ್ ಘೋಷಣೆ ಮಾಡಿದ್ದಾರೆ. ಬಿಹಾರದ ಮುಂಬರುವ ವಿಧಾನಸಭಾ ಚುನಾವಣೆಗೆ ಗುರುವಾರ ಪಾಟ್ನಾದ ಹೋಟೆಲ್ ಮೌರ್ಯದಲ್ಲಿ ನಡೆದ ಬಹುನಿರೀಕ್ಷಿತ ಪತ್ರಿಕಾಗೋಷ್ಠಿಯಲ್ಲಿ ಮಹಾಮೈತ್ರಿಕೂಟವು ದೊಡ್ಡ ಸಂದೇಶ ನೀಡಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಸದ್ಯ ಬಿರುಸುಗೊಂಡಿವೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ, ಇಂಡಿಯಾ ಬಣ ಘೋಷಿಸಿದೆ. ಜೊತೆಗೆ ಇಬ್ಬರು ಉಪಮುಖ್ಯಮಂತ್ರಿ ಅಭ್ಯರ್ಥಿಗಳನ್ನೂ ನೇಮಕ ಮಾಡಿದೆ. ಈ ಘೋಷಣೆಯನ್ನು ಪಾಟ್ನಾದ ಮೌರ್ಯ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಗೆಹ್ಲೋಟ್ ನಡೆಸಿದರು.ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಇದು ತೇಜಸ್ವಿ ಅವರ ಯುವ ಶಕ್ತಿ ಮತ್ತು ಭವಿಷ್ಯದ ನಾಯಕತ್ವವನ್ನು ಒತ್ತಿ ಹೇಳಿದೆ.
ಇನ್ನೂ ಮುಖೇಶ್ ಸಾಹ್ನಿ ಅವರನ್ನು ಮೊದಲ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಬಿಹಾರದ ಜನರಿಗೆ ಅಭಿವೃದ್ಧಿ ಮತ್ತು ನ್ಯಾಯ ಒದಗಿಸುವುದೇ ನಮ್ಮ ಗುರಿ ಅಂತ ಗೆಹ್ಲೋಟ್ ಎಂದಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮಹಾಘಟಬಂಧನದ ಎಲ್ಲಾ ಸದಸ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ ಅಂತ ತೇಜಸ್ವಿ ಯಾದವ್ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ