Bengaluru News: ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ನೇಪಾಳ ಯುವತಿಯನ್ನು ಕೊಂದು 50 ಪೀಸ್‌ಗಳನ್ನಾಗಿ ಮಾಡಿ, ಫ್ರಿಜ್‌ನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ಮಹಾಲಕ್ಷ್ಮೀಯೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮುಕ್ತಿ ಎಂದು ಪತ್ತೆ ಹಚ್ಚಿದ್ದರು. ಆದರೆ ಆರೋಪಿ ಕೈಗೆ ಸಿಗುವ ಮುನ್ನವೇ ಓಡಿಶಾಗೆ ಹೋಗಿ, ಆತ್ಮಹತ್ಯೆಗೆ ಶರಣಾಗಿದ್ದಾನೆ.
ಊರಲ್ಲಿ ಮನೆಯ ಬಳಿ ಇರುವ ಮರಕ್ಕೆ ಮುಕ್ತಿ ನೇಣು ಹಾಕಿಕೊಂಡಿದ್ದಾನೆ. ಅದಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ. ಈ ಡೆತ್ ನೋಟ್‌ನಲ್ಲಿ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದು, ತಾನೇ ಕೊಲೆ ಮಾಡಿದ್ದೆಂದು ಮುಕ್ತಿ ಒಪ್ಪಿಕೊಂಡಿದ್ದಾನೆ.
ಆಕೆಯ ಮನೆಗೆ ಹೋದಾಗ, ಅವರಿಬ್ಬರ ಮಧ್ಯೆ ವೈಯಕ್ತಿಕ ವಿಷಯವಾಗಿ ಜಗಳವಾಯಿತು. ಆಗ ಮಹಾಲಕ್ಷ್ಮೀ ಮುಕ್ತಿ ರಂಜನ್ ರಾಯ್ ಮೇಲೆ ಹಲ್ಲೆ ಮಾಡಿದಳು. ಇದರಿಂದ ಸಿಟ್ಟಿಗೆದ್ದು ಮುಕ್ತಿ ಆಕೆಯನ್ನು ಕೊಂದಿದ್ದಾನೆ. ಬಳಿಕ 59 ಪೀಸ್ ಮಾಡಿ, ಫ್ರಿಜ್‌ನಲ್ಲಿ ಇರಿಸಿದ್ದಾನೆ. ಆಕೆಯ ನಡುವಳಿಕೆ ಇಷ್ಟವಾಗದೇ ಈ ಕೃತ್ಯ ಎಸಗಿದೆ ಎಂದು ಆತ ಡೆತ್ ನೋಟ್‌ನಲ್ಲಿ ಒಪ್ಪಿಕೊಂಡಿದ್ದಾನೆ.
ಬಳಿಕ ಬಾತ್‌ರೂಮ್‌ನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿ, ಸಾಕ್ಷಿ ನಾಶಕ್ಕೂ ಮುಕ್ತಿ ಯತ್ನಿಸಿದ್ದ. ಬಳಿಕ ಓಡಿಶಾಗೆ ತೆರಳಿದ ಮುಕ್ತಿ ಒಂದೆರಡು ದಿನ ಮನೆಯಲ್ಲಿ ಕಾಲ ಕಳೆದು, ರಾತ್ರಿ ಹೊತ್ತಲ್ಲಿ ಲ್ಯಾಪ್‌ಟಾಪ್ ಸಮೇತವಾಗಿ, ಸ್ಕೂಟಿ ತೆಗೆದುಕೊಂಡು ಹೋದವ ಮತ್ತೆ ಮರಳಿ ಮನೆಗೆ ಬರಲಿಲ್ಲ. ಬಳಿಕ ನೋಡಿದಾಾಗ, ಮನೆಯ ಹತ್ತಿರದ ಸ್ಮಶಾನದಲ್ಲಿ ಮುಕ್ತಿ ನೇಣಿಗೆ ಶರಣಾಗಿದ್ದಾನೆ. ಇನ್ನು ಈ ಬಗ್ಗೆ ಓಡಿಶಾದ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.