Bengaluru news: ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ನೇಪಾಳದ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಹಲವು ಭಾಗಗಳನ್ನಾಗಿ ಮಾಡಿ, ಫ್ರಿಜ್ನಲ್ಲಿ ಇರಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುವಾಗ, ಪತಿಯ ಮೇಲೆ ಮೊದಲು ಅನುಮಾನ ಬಂದಿತ್ತು. ಡಿವೋರ್ಸ್ ಪಡೆದು, ದೂರವಾದ ಬಳಿಕವೂ, ಆಕೆಯ ಮೇಲಿರುವ ಸಿಟ್ಟಿನಿಂದ ಪತಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು.
ಆದರೆ ತನಿಖೆ ಚುರುಕಾದ ಬಳಿಕ ಸಹೋದ್ಯೋಗಿ ಮುಕ್ತಿ ಮೇಲೆ ಪೊಲೀಸರಿಗೆ ಅನುಮಾನ ಶುರುವಾಗಿ, ಆತ ಎಲ್ಲಿದ್ದಾನೆ ಎಂಬ ಹುಡುಕಾಟ ಶುರುವಾಗಿತ್ತು. ಯಾಕಂದ್ರೆ ಮಹಾಲಕ್ಷ್ಮೀ ಕೊಲೆಯಾದ ಬಳಿಕ ಮುಕ್ತಿ ಮಾಲ್ಗೆ ಕೆಲಸಕ್ಕೆ ಬರಲಿಲ್ಲ. ಹಾಗಾಗಿ ಪೊಲೀಸರು ಮುಕ್ತಿಯ ಹುಡುಕಾಟ ಶುರು ಮಾಡಿದ್ದರು. ಇದೀಗ ತನ್ನ ಬಂಡವಾಳ ಬಯಲಾಗಿ, ಎಲ್ಲಿ ತನ್ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟುತ್ತಾರೋ ಎಂಬ ಆತಂಕದಿಂದ ಮುಕ್ತಿ ಓಡಿಶಾಗೆ ಹೋಗಿ, ನೇಣಿಗೆ ಶರಣಾಗಿದ್ದಾನೆ.
ಮಹಾಲಕ್ಷ್ಮೀ ಹತ್ಯೆಯಾದ ಬಳಿಕ ಮುಕ್ತಿ ಮಾಲ್ಗೆ ಕೆಲಸಕ್ಕೆ ಹೋಗದೇ, ತಲೆಮರೆಸಿಕೊಂಡು ಓಡಾಡುತ್ತಿದ್ದ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದಂತೆ, ಮುಕ್ತಿ ಕೊಲೆ ಆರೋಪಿ ಇರಬಹುದು ಎಂದು ಬೆಂಗಳೂರು ಪೊಲೀಸರು ಓಡಿಶಾಗೆ ತೆರಳಿ, ಅಲ್ಲಿ ತನಿಖೆ ನಡೆಸಿದ್ದರು. ಇದೀಗ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಮುಕ್ತಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

