Friday, November 22, 2024

Latest Posts

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಗುಪ್ತಚರ ವರದಿ ಬಹಿರಂಗಪಡಿಸಿದೆ : ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

- Advertisement -

ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ರಾಜ್ಯದ ಗಡಿಯಲ್ಲಿರುವ ಕೆಲವು ಗ್ರಾಮಗಳನ್ನು ನೆರೆಯ ರಾಜ್ಯಗಳಿಗೆ ಸೇರಿಸಬೇಕೆಂಬ ಬೇಡಿಕೆಯು ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದಾರೆ. ಕೆಲವು ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹಿಂದಿನದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಜನವೆರಿ 1ರೊಳಗೆ ಪ್ರಕಟಿಸಲಾಗುವುದು : ಡಿಕೆ ಶಿವಕುಮಾರ್

ಈ ಪದಾಧಿಕಾರಿಗಳು ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ನೆರೆಯ ರಾಜ್ಯಗಳೊಂದಿಗೆ ಗಡಿ ಗ್ರಾಮಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಗಡಿ ವಿವಾದದಿಂದ ರಾಜಕೀಯ ವಾತಾವರಣ ಬಿಸಿಯಾಗುತ್ತಿದೆ. ಕರ್ನಾಟಕದೊಂದಿಗಿನ ಗಡಿ ವಿವಾದದ ಕುರಿತು ರಾಜ್ಯದಲ್ಲಿ ರಾಜಕೀಯ ವಾತಾವರಣ ಬಿಸಿಯಾಗುತ್ತಿದ್ದು, ಕಳೆದ ಕೆಲವು ವಾರಗಳಲ್ಲಿ ಗಡಿ ಭಾಗದಲ್ಲಿರುವ ಗ್ರಾಮಗಳು ಕರ್ನಾಟಕ, ಗುಜರಾತ್ ಮತ್ತು ಇತರ ರಾಜ್ಯಗಳೊಂದಿಗೆ ವಿಲೀನಗೊಳ್ಳಲು ಒತ್ತಾಯಿಸಿವೆ ಎಂದು ಫಡ್ನವಿಸ್ ಹೇಳಿದರು.

ಬೆಂಗಳೂರಿನ ಹೊರವಲಯಗಳಲ್ಲಿ ಚಿರತೆ ಪ್ರತ್ಯಕ್ಷ

ನನಗೆ ಗೃಹ ಖಾತೆಯ ಹೊಣೆಯೂ ಇದೆ. ಶಿಂಧೆ ಸರ್ಕಾರ ಬಂದ ನಂತರ ಗಡಿ ವಿವಾದ ಹೆಚ್ಚಿದಂತಿದೆ ಎಂದು ಅವರು ಹೇಳಿದರು. ನೆರೆಯ ಇತರ ರಾಜ್ಯಗಳೊಂದಿಗೆ ವಿಲೀನವಾಗಬೇಕೆಂಬ ಈ ಎಲ್ಲಾ ಬೇಡಿಕೆಗಳು ಪಿತೂರಿಯ ಭಾಗವಾಗಿದೆ ಎಂದು ಗುಪ್ತಚರ ವರದಿಗಳು ಸೂಚಿಸುತ್ತವೆ. ಕೆಲವರು ನಾವು ಗುಜರಾತ್, ಆಂಧ್ರಪ್ರದೇಶದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಮಾಡುವವರು ಸರ್ಕಾರಕ್ಕೆ ಎಲ್ಲಾ ರಾಜಕೀಯ ಪಕ್ಷದ ಪದಾಧಿಕಾರಿಗಳ ಬಗ್ಗೆ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಸರ್ಕಾರ ಸದನದ ಮುಂದೆ ಇಡಲಿದೆ ಎಂದು ತಿಳಿಸಿದರು.

ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಿಎಂ ಬೊಮ್ಮಾಯಿ ಬೆಳಗಾವಿಗೆ ಆಗಮನ

ಪೇಟೆಂಟ್ ಮಂಜೂರಾತಿ ಸಮಯ ಕಡಿಮೆ ಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ : ಸಚಿವೆ ನಿರ್ಮಲಾ ಸೀತಾರಾಮನ್

6

 

- Advertisement -

Latest Posts

Don't Miss