ಚಿಕ್ಕೋಡಿ :ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ವೇಳೆ ಬಸ್ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು.
ಹೌದು ಮೀಸಲಾತಿ ವಿಚಾರವಾಗಿ ಸೋಮವಾರ ಶಾಸಕರ ಮನೆಗೆ ಬೆಂಕಿ ಇಟ್ಟು ಘಟನೆ ನಡೆದಿದ್ದು ಇಂದು ಸಹ ಮರಾಠ ಸಮುದಾಯದವರ ಪ್ರತಿಭಟೆನ ಮುಂದುವರಿದಿದ್ದು ಜತ್ತ ಸಮೀಪದಲ್ಲಿ ಕೆಎಸ್ ಆರ್ಟಿಸಿ ಬಸ್ ಗಳಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆಸಿದರು. ವಿಜಯಪುರ ತಾಲೂಕಿನ ಇಂಡಿ ಘಟಕಕ್ಕೆ ಸೇರಿದ ಬಸ್ಸನ್ನು ಜತ್ತ ಪಟ್ಟಣದಿಂದ ವಿಜಯಪುರ ನಗರಕ್ಕೆ ತೆರಳುತಿದ್ದ ವೇಳೆ ಕಲ್ಲು ತೂರಿ ಚಿದ್ರಗೊಳಿಸಿದ್ದಾರೆ. ಕಲ್ಲು ತೂರಾಟದಿಂದ ಬಸ್ಸಿನಲ್ಲಿರುವ ಪ್ರಯಾಣಿಕರಿಗೆ ತಗುಲಿ ಗಾಯಗೊಂಡಿದ್ದಾರೆ. ಕಲ್ಲು ಬಿದ್ದ ರಭಸಕ್ಕೆ ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆ.
ಪ್ರತಿಭಟನೆಯ ಪರಿಣಾಮದಿಂದಾಗಿ ಇಂದು ಜತ್ತ ಪಟ್ಟಣ ಸಂಪೂರ್ಣ ಸ್ಥಬ್ದವಾಗಿದೆ.ಇನ್ನು ಈ ಘಟನೆ ಜತ್ತ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸ್ ನಲ್ಲಿ ಬಿಟ್ಟು ಹೋಗಿದ್ದ 3ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್..!!
ಗಣಿ ನಾಡಿನಲ್ಲಿ ನೀರಿಗಾಗಿ ಆಹಾಕಾರ;ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ..!
ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ :ನಗರಸಭೆ ನಡೆ ಖಂಡಿಸಿ ಪ್ರತಿಭಟನೆ..!