Friday, October 17, 2025

Latest Posts

Netflix ನಲ್ಲಿ ಲಭ್ಯ ‘ಮಹಾವತಾರ್ ನರಸಿಂಹ’ ಸಿನಿಮಾ!

- Advertisement -

ಹೊಂಬಾಳೆ ಫಿಲಂಸ್ ನಿರ್ಮಿಸಿ ವಿತರಣೆ ಮಾಡಿರುವ ಪೌರಾಣಿಕ ಕಥೆಯನ್ನು ಆಧರಿಸಿದ ಅನಿಮೇಷನ್ ಸಿನಿಮಾ ‘ಮಹಾವತಾರ್ ನರಸಿಂಹ’ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಸತತ ಪೋಷಣೆ ಸಿಕ್ಕ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಎಲ್ಲ ನಿರೀಕ್ಷೆಗಳನ್ನು ಮೀರಿದ ಯಶಸ್ಸು ಸಾಧಿಸಿತು. ಈ ಸಿನಿಮಾ ದೊಡ್ಡ ತಾರೆಯರು ನಟಿಸಿರುವ ಸಿನಿಮಾಗಳನ್ನೂ ಹಿಂದಿಕ್ಕುವಂತೆ ಗಮನ ಸೆಳೆದಿದೆ.

ಅಶ್ವಿನ್ ಕುಮಾರ್ ನಿರ್ದೇಶನದ ಈ ಅನಿಮೇಷನ್ ಚಿತ್ರವು ವಿಭಿನ್ನ ಕಥಾಹಂದರ ಮತ್ತು ಅದ್ಭುತ ದೃಶ್ಯಾವಳಿಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲ ವಯಸ್ಸಿನ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ‘ಮಹಾವತಾರ್ ನರಸಿಂಹ’ ನೋಡಲು ನಿರಂತರವಾಗಿ ಹಾಜರಾಗಿದ್ದರು.

ಈಗ, 56 ದಿನಗಳ ಸುದೀರ್ಘ ಕಾಯುವಿಕೆಯಿಂದ ಬಳಿಕ, ‘ಮಹಾವತಾರ್ ನರಸಿಂಹ’ ಚಿತ್ರವು ಒಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ನೆಟ್‌ಫ್ಲಿಕ್ಸ್ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಿಳಿಸಿದಂತೆ, ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12:30ರಿಂದ ಈ ಸಿನಿಮಾ ದೇಶಾದ್ಯಂತ ವೀಕ್ಷಿಸಲು ಲಭ್ಯವಾಗಲಿದೆ.

ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದವರು ಈಗ ತಮ್ಮ ಮನೆಗಳಲ್ಲಿ ಸುಲಭವಾಗಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಹೀಗಾಗಿ ಅನಿಮೆಷನ್ ಪ್ರಿಯರು ಮತ್ತು ಕುಟುಂಬಗಳಿಗಾಗಿ ಇದು ಸಂತೋಷದ ಸುದ್ದಿ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss