ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಆಪರೇಷನ್ ಹಸ್ತದ ಮೂಲಕ ಬಿಜೆಪಿ ನಾಯಕರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಳ್ಳುತ್ತಿದ್ದು ಸಾಕಷ್ಟು ಜನ ಪಕ್ಷ ಬದಲಾವಣೆ ಮಾಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಮಾದ್ಯಮದವರಿಗೆ ಕಾಂಗ್ರೆಸ್ ನಾಯಕರ ವಿರುದ್ದ ಸ್ವಲ್ಪ ಖಾರವಾಗಿ ಉತ್ತರಿಸಿದರು.
ಬಿಜೆಪಿಯಲ್ಲಿ ಟಿಕೆಟ್ ಮಾರಾಟ ಪದ್ದತಿಯಲ್ಲ ಕೆಲವರು ತಮ್ಮ ಚಟಕ್ಕೆ ಟಿಕೆಟ್ ಮಾರಾಟ ಮಾಡಿದ್ದಾರೆ ಅದಕ್ಕೆಲ್ಲ ಬಿಜೆಪಿ ಉತ್ತರ ನೀಡುವುದಿಲ್ಲ.ಹಾಗೂ ಬಜೆಪಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಮಾಜಿ ಸಿಎಂ ಹೇಗೆ ಟಿಕೇಟ್ ತೆಗೆದುಕೊಂಡಿದ್ದರು ತಾವು ಹೇಗೆ ಟಿಕೇಟ್ ಕೊಟ್ಟಿದ್ದರು ಅಂತ ಎಲ್ಲಾ ಗೊತ್ತಿದೆ. ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ದ ಶಾಸಕ ಮಹೇಶ್ ಟೆಂಗಿನಕಾಯಿ ಕಿಡಿಕಾರಿದರು.
ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾಯತ ಸಮುದಾಯದವರಿಗೆ ಬಿಜೆಪಿ ಟಿಕೆಟ್ ನೀಡಿ ಅವಕಾಶ ಕೊಟ್ಟಿದೆ.ಹಾಗೂ ಶೆಟ್ಟರ್ ಅವರಿಗೂ ಕಳೆದ 30 ವರ್ಷದಿಂದ ಬಿಜೆಪಿ ಎಲ್ಲಾ ಕೊಟ್ಟಿದೆ. ನಿಮಗೆ ಅನ್ಯಾಯವಾಗಿದ್ದರೆ ನಿಮಗೆ ತಾಕತ್ತಿದ್ದರೆ ಎಲ್ಲವನ್ನೂ ಸರಿ ಮಾಡಕೊಳ್ಳಿ. ರಾಜಕೀಯದಲ್ಲಿ ಸಮುದಾಯವನ್ನು ಎಳೆದು ತರಬಾರದು ರಾಜಕೀಯಕ್ಕೋ ಸಮುದಾಯಕ್ಕೂ ಸಂಬಂಧವಿಲ್ಲ ಕಾಂಗ್ರೆಸ್ ನಲ್ಲಿ ಶೇಟ್ಟರ್ ಅವರನ್ನು ಯಾರು ಗುರುತಿಸುತ್ತಿಲ್ಲ ಇದರಿಂದಾಗಿ ಅವರಿಗೆ ಕಷ್ಟವಾಗಿದೆ ಹಾಗಾಗಿ ಶೆಟ್ಟರ್ ಅವರು ಮಾಧ್ಯಮದವರಿಗೆ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
Prajwal Revanna : ಸಂಸದ ಪ್ರಜ್ವಲ್ ರೇವಣ್ಣಗೆ ಕೊಂಚ ರಿಲೀಫ್ : ಹೈಕೋರ್ಟ್ ಅಮಾನತು ಆದೇಶ ತಡೆ
Thalak : ವಿದೇಶದಿಂದಲೇ ವಾಟ್ಸಾಪ್ ನಲ್ಲಿ ತ್ರಿವಳಿ ತಲಾಕ್ ನೀಡಿದ ಪತಿ : ಬ್ಯಾನ್ ಆದರೂ ಮುಂದುವರೆದ ಪದ್ಧತಿ..!
Puneeth KereHalli : ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಿಸಲಾಗಿದ್ದ ಗೂಂಡಾ ಕಾಯ್ದೆ ರದ್ದು