ಒಂದೇ ವೇದಿಕೆಯಲ್ಲಿ ಪ್ರಿನ್ಸ್ ಮಹೇಶ್ ಹಾಗೂ ಬನ್ನಿ ಅಲ್ಲು ಏನಿದು ವಿಶೇಷ..?

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಗುಣಶೇಖರ ಅವರ ಮಗಳ ಮದುವೆಯ ಆರತಕ್ಷತೆಯ ಸಮಾರಂಭವು ಎನ್.ಕನ್ವೆನ್ಷನ್ ಹಾಲ್ ನಲ್ಲಿ ನಡೆದಿತ್ತು.
ನೂತನ ವಧು-ವರರನ್ನು ಹಾರೈಸಿ ಆಶೀರ್ವದಿಸಲು ಸಾಕಷ್ಟು ಗಣ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಪ್ರಿನ್ಸ್ ಎಂದೇ ಖ್ಯಾತರಾದ ಮಹೇಶ್ ಬಾಬು ಅವರು ಮೆಹೆರ್ ರಮೇಶ್ ಹಾಗೂ ಇತರೆ ಕೆಲ ವ್ಯಕ್ತಿಗಳೊಡಗೂಡಿ ಸಮಾರಂಭಕ್ಕೆ ಆಗಮಿಸಿ

ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ಜೊತೆ ಅವರ ವೈಯಕ್ತಿಕ ತಂಡವೊಂದು ಬಂದಿತ್ತು.
ವೇದಿಕೆಯ ಮೇಲೆ ಮಹೇಶ್ ಬಾಬು ನಿಂತಿರುವ ಬಗ್ಗೆ ಗೊತ್ತಾಗಿರಲಿಲ್ಲ.
ಧಿಡೀರ್ ವೇದಿಕೆಗೆ ಬಂದ ಅಲ್ಲು ಅರ್ಜುನ್ ಮಹೇಶ್ ಬಾಬು ನೋಡಿ ಶಾಕ್ ಆದ್ರೂ ನಂತರ ಕೈ ಕುಲುಕಿ ಅಲ್ಲಿಂದ ನಿರ್ಗಮಿಸಿದರು.
ದಿಗ್ಗಜ ನಟರಿಬ್ಬರು ಒಂದೇ ವೇದಿಕೆ ಮೇಲೆ ಬರುವುದು ಬಲು ಅಪರೂಪ.
ಈ ಇಬ್ಬರೂ ನಟರ ಅನಿರೀಕ್ಷಿತ ಭೇಟಿ ಇಬ್ಬರ ಅಭಿಮಾನಿಗಳಿಗೂ ಅಪರೂಪದ ಕ್ಷಣ ಎಂದೇ ಹೇಳಬಹುದು.

About The Author