Thursday, October 16, 2025

Latest Posts

ರಿಯಲ್ ಎಸ್ಟೇಟ್ ವಿವಾದದಲ್ಲಿ ಸಿಲುಕಿದ ಮಹೇಶ್ ಬಾಬು!

- Advertisement -

ಟಾಲಿವುಡ್‌ನ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಸ್ಟೈಲೇ ಡಿಫರೆಂಟ್‌. ತಮ್ಮ ನಟನೆಯ ಮೂಲಕ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ ಮಹೇಶ್ ಬಾಬು ಅವರು ರಿಯಲ್ ಎಸ್ಟೇಟ್ ವಿವಾದದಲ್ಲಿ ಸಿಲುಕಿದ್ದಾರೆ. ಇದು ಮಹೇಶ್ ಬಾಬು ಅವರ ಫ್ಯಾನ್ಸ್‌ಗೆ ಶಾಕಿಂಗ್ ಸುದ್ದಿಯಾಗಿದೆ. ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗ ಮಹೇಶ್ ಬಾಬು ಅವರಿಗೆ ನೋಟಿಸ್ ನೀಡಿದೆ.

ಮಹೇಶ್ ಬಾಬು ಅವರು ಒಂದು ರಿಯಲ್ ಎಸ್ಟೇಟ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿದ್ದರು. ಕಂಪನಿಯು ಮಾಡಿದ ವಂಚನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲಾಗಿದ್ದು, ಮಹೇಶ್ ಬಾಬು ಹೆಸರನ್ನೂ ಸೇರಿಸಲಾಗಿದೆ. ಮಹೇಶ್ ಬಾಬು ಅವರ ಫೋಟೋ ಅನ್ನು ಬಳಸಿ, ಒಂದು ಲೇಔಟ್ ಹೂಡಿಕೆಗೆ ಪ್ರೋತ್ಸಾಹ ನೀಡಲಾಗಿತ್ತು. ಈ ಪ್ರಕರಣದಲ್ಲಿ, ವೈದ್ಯರೊಬ್ಬರು ಸಲ್ಲಿಸಿದ ದೂರಿನ ಪ್ರಕಾರ, ಮಹೇಶ್ ಬಾಬು ಅವರ ಫೋಟೋ ಇರುವ ಕರಪತ್ರವನ್ನು ನೋಡಿದ ನಂತರ ಅವರು ಬಾಲಾಪುರ ಗ್ರಾಮದ ಲೇಔಟ್‌ನಲ್ಲಿ ಪ್ಲಾಟ್‌ಗಳನ್ನು ಖರೀದಿಸಿದರು ಎನ್ನಲಾಗಿದೆ.

ಪ್ರತಿ ಪ್ಲಾಟ್‌ಗೆ ₹34.80 ಲಕ್ಷ ಪಾವತಿಸಿದರು, ಆದರೆ ನಂತರ ತಿಳಿದು ಬಂದಂತೆ ಆ ಲೇಔಟ್‌ಗೆ ಪರ್ಮಿಟ್‌ಗಳು ಇಲ್ಲ ಅನ್ನೋದು ತಿಳಿದು ಬಂದಿದೆ. ಡೆವಲಪರ್‌ಗಳಿಗೆ ಹಣವನ್ನು ಹಿಂದಿರುಗಿಸಲು ಕೇಳಿದಾಗ, ಕಂಪನಿಯ ಎಂಡಿ ಕಾಂಚರ್ಲಾ ಸತೀಶ್ ಚಂದ್ರಗುಪ್ತ ಕೇವಲ 15 ಲಕ್ಷ ರೂ.ಗಳನ್ನು ಹಿಂದಿರುಗಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ನೋಟಿಸ್‌ಗೆ ಜುಲೈ 8ರ ಒಳಗೆ ಹಾಜರಾಗಲು ಸೂಚಿಸಲಾಗಿದೆ. ಇದರಲ್ಲಿ, ಮಹೇಶ್ ಬಾಬು ಅವರ ಪ್ರತಿಕ್ರಿಯೆ ಏನು ಅನ್ನೋದಕ್ಕೆ ಕಾಯಬೇಕು.

ಮಹೇಶ್ ಬಾಬು ಅವರ ಸಿನಿಮಾಗಳ ಬಗ್ಗೆ ನೋಡುವುದಾದರೆ ಈಗ, ಮಹೇಶ್ ಬಾಬು ಅವರ ಮುಂದಿನ ಚಿತ್ರ SSMB29. ಇದು ಡೈರೆಕ್ಟರ್ ರಾಜಮೌಳಿ ಅವರ ನಿರ್ದೇಶನದಲ್ಲಿ ಬರಲಿದೆ. ಈಗಾಗಲೇ, ಈ ಚಿತ್ರ ಪ್ರೇಕ್ಷಕರಿಂದ ಭಾರಿ ನಿರೀಕ್ಷೆಗಳನ್ನು ಹೊಂದಿದೆ. ಈ ಚಿತ್ರ 2026ರಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಚಿತ್ರೀಕರಣ ಪ್ರಸ್ತುತ ವೇಗವಾಗಿ ನಡೆಯುತ್ತಿದೆ. 1000 ಕೋಟಿ ರೂ. ಬಜೆಟ್‌ನಲ್ಲಿ ನಡೆಯಲಿದ್ದು, ಈ ಚಿತ್ರದ ಕಥೆ ಆಫ್ರಿಕನ್ ಕಾಡುಗಳಲ್ಲಿ ನಡೆಯಲಿದೆ, ಇದು ಹಿಂದಿನ ಚಿತ್ರಗಳಿಂದ ವಿಭಿನ್ನವಾಗಿದೆ. ಹಾಗೇ, ಮಹೇಶ್ ಬಾಬು ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಚಿತ್ರವು ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಾಂತ ಪ್ರೇಕ್ಷಕರಿಂದ ಬಾರಿ ಸಂಭ್ರಮ ಪಡೆಯುವದು ಖಚಿತವಾಗಿದೆ.

ವರದಿ : ಲಾವಣ್ಯಾ ಅನಿಗೊಳ

- Advertisement -

Latest Posts

Don't Miss