ಬುರಡೆ ಸೂತ್ರಧಾರಿಗಳಿಗೆ ಎಸ್‌ಐಟಿ ಖೆಡ್ಡಾ ತೋಡಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯನ ಹೇಳಿಕೆ ಆಧರಿಸಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ, ಆಗಸ್ಟ್ 26ರ ಬೆಳ್ಳಂಬೆಳಗ್ಗೆಯೇ ಎಸ್‌ಐಟಿ ದಾಳಿ ಮಾಡಿದೆ. ಬುರುಡೆ ಕೊಟ್ಟು ಆಶ್ರಯ ಕೊಟ್ಟಿದ್ದಾಗಿ, ಚಿನ್ನಯ್ಯ ಹೇಳಿದ್ದಾನೆ. ಹೀಗಾಗಿ ಸರ್ಚ್ ವಾರೆಂಟ್ ಸಮೇತ ಸ್ಥಳ ಮಹಜರು ಮಾಡಲಾಗ್ತಿದೆ.
ಬೆಳ್ತಂಗಡಿಯ ಉಜಿರೆಯಿಂದ ಎರಡ್ಮೂರು ಕಿಲೋ ಮೀಟರ್ ದೂರದಲ್ಲಿರುವ, ತಿಮರೋಡಿ ಗ್ರಾಮದ ಮಹೇಶ್‌ಶೆಟ್ಟಿ ನಿವಾಸದಲ್ಲಿ ಪರಿಶೀಲನೆ ಮಾಡಲಾಗಿದೆ. ಎಸ್‌ಐಟಿ ದಾಳಿ ವಿಷ್ಯ ಗೊತ್ತಾಗುತ್ತಿದ್ದಂತೆ, ಮಹೇಶ್ ಶೆಟ್ಟಿ ತಿಮರೋಡಿ ಎಸ್ಕೇಪ್ ಆಗಿದ್ದಾರೆ. ಪತ್ನಿ, ಪುತ್ರ ಇದ್ದು, ಇವರಿಬ್ಬರು ಸಮ್ಮುಖದಲ್ಲಿ, ಮನೆಯ ಮೂಲೆ ಮೂಲೆಯನ್ನೂ ಸರ್ಚ್ ಮಾಡಲಾಗ್ತಿದೆ.
ಷಡ್ಯಂತ್ರ ಮಾಡಿರುವ ಎಲ್ಲರ ಹೆಸರನ್ನೂ ಚಿನ್ನಯ್ಯ ಹೇಳಿದ್ದಾನೆ. ಆತ ಉಳಿದುಕೊಂಡಿದ್ದು ಎಲ್ಲಿ. ಆತನ ಜೊತೆ ಯಾರ್ಯಾರು ಇರ್ತಿದ್ರು. ಆತನ ವಕೀಲರೂ ಕೂಡ ತಿಮರೋಡಿ ನಿವಾಸದಲ್ಲೇ ಉಳಿದುಕೊಳ್ತಿದ್ರಂತೆ. ಈ ಪ್ರಕರಣಕ್ಕೂ ತಿಮರೋಡಿಗೂ ಏನ್ ಸಂಬಂಧ?. ತಿಮರೋಡಿ ಪಾತ್ರವೇನು?. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿಮರೋಡಿ ಮನೆಯಲ್ಲಿ ಏನಾದ್ರೂ ಮಹತ್ವದ ದಾಖಲೆಗಳು ಸಿಗುತ್ತಾ ಅನ್ನೋ ನಿಟ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನ ಕೇಸ್ ಸಂಬಂಧ, ಆಗಸ್ಟ್ 21ರಂದು ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಅರೆಸ್ಟ್ ಮಾಡಿದ್ರು. ಆ ವೇಳೆ ತಿಮರೋಡಿ ಬೆಂಬಲಿಗರು ದೊಡ್ಡ ಹೈಡ್ರಾಮಾವನ್ನೇ ಕ್ರಿಯೇಟ್ ಮಾಡಿದ್ರು. ಹೀಗಾಗಿ ಮುಂಜಾಗ್ರತೆಯಾಗಿ, ಮಂಗಳೂರು, ಬಂಟ್ವಾಳ, ಪುತ್ತೂರು ವಿಭಾಗಗಳಿಂದ ಹೆಚ್ಚುವರಿ ಪೊಲೀಸರನ್ನೂ, ಕರೆಸಿಕೊಳ್ಳಲಾಗಿದೆ. ತನಿಖಾಧಿಕಾರಿ ಜಿತೇಂದ್ರ ದಯಾಮ ಸೇರಿದಂತೆ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳೂ ಬಂದಿದ್ದಾರೆ.
ತಿಮರೋಡಿ ನಿವಾಸ ಮಾತ್ರವಲ್ಲ.. ಅವರ ಸಹೋದರ ಮೋಹನ್ ಕುಮಾರ್ ಶೆಟ್ಟಿಗೂ, ಎಸ್‌ಐಟಿ ಶಾಕ್ ಕೊಟ್ಟಿದೆ. ತಿಮರೋಡಿ ಮನೆಯ ಪಕ್ಕದಲ್ಲೇ ಇರುವ ಮೋಹನ್ ಶೆಟ್ಟಿ ನಿವಾಸದ ಮೇಲೂ, ಎಸ್‌ಐಟಿ ಮತ್ತೊಂದು ತಂಡ ದಾಳಿ ಮಾಡಿದೆ.
ಇನ್ನು, ಬುರುಡೆ ಗ್ಯಾಂಗ್ ರಹಸ್ಯ ಬಗೆದಷ್ಟು ಬಯಲಾಗ್ತಿದ್ದು, ತಲಾಶ್ ವೇಳೆ ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದೆ. ಅಧಿಕಾರಿಗಳು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಸೂತ್ರಧಾರಿಗಳ ಬಳಿ ತನ್ನ ಮೊಬೈಲ್ ಇರುವುದಾಗಿ ಚಿನ್ನಯ್ಯ ಹೇಳಿದ್ದ. ವಿಚಾರಣೆಯ ಆರಂಭದಲ್ಲಿ ತನ್ನ ಬಳಿ ಮೊಬೈಲ್ ಇಲ್ಲ ಎಂದಿದ್ದ. ಅಧಿಕಾರಿಗಳ ಗ್ರಿಲ್ ಬಳಿಕ, ಬುರುಡೆ ಗ್ಯಾಂಗ್ ಬಳಿ ಇರುವುದಾಗಿ ಹೇಳಿದ್ದ. ವಕೀಲರನ್ನು ಬಿಟ್ಟು, ಬೇರೆ ಯಾರ ಬಳಿಯೂ ಮಾತನಾಡಲು ಬಿಡುತ್ತಿರಲಿಲ್ಲ ಎಂದಿದ್ದ. ಈಗ ಆತ ಹೇಳಿದಂತೆಯೇ ಆಂಡ್ರಾಯ್ಡ್ ಮೊಬೈಲ್ ಸಿಕ್ಕಿದೆ. ಜೊತೆಗೆ ಚಿನ್ನಯ್ಯನ ಬಟ್ಟೆಗಳೂ ಪತ್ತೆಯಾದ್ದು, ವಶಕ್ಕೆ ಪಡೆಯಲಾಗಿದೆ.
ಇನ್ನೂ ಬುರುಡೆ ಹಿಡಿದು ಕೋರ್ಟ್, ಪೊಲೀಸರ ಎದುರು ಚಿನ್ನಯ್ಯ ಬರುವುದಕ್ಕೂ ಮುಂಚೆಯೇ, ತಿಮರೋಡಿ ಮನೆಯಲ್ಲಿ ಸಂದರ್ಶನಗಳನ್ನು ಕೊಟ್ಟಿದ್ದಾನೆ. 2020ರಿಂದ 2025ರವರೆಗೆ ಹಲವು ಮಾಧ್ಯಮಗಳಿಗೆ ಸಂದರ್ಶನ ಕೊಟ್ಟಿದ್ದಾನೆ. ಚಿನ್ನಯ್ಯನಿಗಾಗಿಯೇ ಒಂದು ಕೋಣೆಯನ್ನು, ತಿಮರೋಡಿ ಮನೆಯಲ್ಲಿ ಮೀಸಲಿಡಲಾಗಿತ್ತಂತೆ. ಇನ್ನು, ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನಯ್ಯನ ಚಲನವಲನಗಳ ಬಗ್ಗೆ ಎಸ್‌ಐಟಿ ಗಮನವಿಟ್ಟಿದೆ. ತಿಮರೋಡಿ ಮನೆಯಲ್ಲಿದ್ದಾಗ ಚಿನ್ನಯ್ಯನ ಭೇಟಿಗೆ, ಯಾರೆಲ್ಲಾ ಬರ್ತಿದ್ರು ಅನ್ನೋ ಮಾಹಿತಿ ಸಂಗ್ರಹಿಸಲಾಗ್ತಿದೆ.
ನೇತ್ರಾವತಿ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ವೇಳೆಯೂ, ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಉಳಿದುಕೊಳ್ತಿದ್ದ. ಕಾರ್ಯಾಚರಣೆ ಮುಗಿದ ಬಳಿಕ ವಕೀಲರ ಕಾರಿನಲ್ಲಿ, ತಿಮರೋಡಿ ಮನೆಗೆ ಹೋಗ್ತಿದ್ದ. ಸುಮಾರು 2 ತಿಂಗಳ ಕಾಲ ತಿಮರೋಡಿ ಮನೆಯಲ್ಲೇ ತಂಗಿದ್ದನಂತೆ.
ಚಿನ್ನಯ್ಯನನ್ನ ರಾಜ್ಯದ ಪ್ರಖ್ಯಾತ ಸ್ವಾಮೀಜಿಗಳ ಬಳಿ ಕರೆದುಕೊಂಡು ಹೋಗಲಾಗಿತ್ತಂತೆ. ಈ ವಿಡಿಯೋಗಳು ತಿಮರೋಡಿ ಮನೆಯಲ್ಲೇ ಇದೆ ಅಂತಾ ಚಿನ್ನಯ್ಯ ಹೇಳಿದ್ದಾನೆ. ಜೊತೆಗೆ ಪುಣೆಯಲ್ಲಿರುವ ವಕೀಲರನ್ನೂ ಭೇಟಿ ಮಾಡಿಸಲಾಗಿತ್ತಂತೆ.
ಒಟ್ನಲ್ಲಿ, ಬುರುಡೆ ಗ್ಯಾಂಗ್‌ಗೆ ತಿಮರೋಡಿ ಮನೆಯೇ ಪವರ್ ಸೆಂಟರ್ ಆಗಿತ್ತು. ಚಿನ್ನಯ್ಯನಿಗೆ ಆಶ್ರಯ ಮತ್ತು ಫಂಡಿಂಗ್ ಮಾಡಿರುವ ಕಾರಣಕ್ಕೆ, ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್ ಆಗುವ ಸಾಧ್ಯತೆ ಇದೆ.




