Sunday, October 5, 2025

Latest Posts

ವಿಜಯ್ ರ್ಯಾಲಿಯಲ್ಲಿ ಭಾರಿ ದುರಂತ – ಮಕ್ಕಳು, ಮಹಿಳೆಯರು ಸೇರಿ 31 ಜನ ಸಾವು

- Advertisement -

ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ. 29 ಮಂದಿ ಸಾವು, 30 ಮಂದಿಗೆ ಗಂಭೀರಗಾಯಗಳಾಗಿವೆ. ಮೂರ್ಛೆ ಹೋದವರಲ್ಲಿ ಹಲವಾರು ಟಿವಿಕೆ ಕಾರ್ಯಕರ್ತರು ಕೂಡ ಇದ್ದರು. ವಿಜಯ್ ಪಕ್ಷದ ಕಾರ್ಯಕರ್ತರಿಗೆ ನೀರಿನ ಬಾಟಲಿಗಳನ್ನು ನೀಡಿರುವುದಾಗಿ ವರದಿಯಾಗಿದೆ.

ಸೆಪ್ಟೆಂಬರ್ 27, ಶನಿವಾರ ಸಂಜೆ, ರಾಜ್ಯದ ಪಶ್ಚಿಮ ಭಾಗದ ಕರೂರ್ ಜಿಲ್ಲೆಯಲ್ಲಿ ತಮಿಳು ನಟ-ರಾಜಕಾರಣಿ ವಿಜಯ್ ಅವರ ಪಕ್ಷವಾದ ಟಿವಿಕೆ ನಡೆಸಿದ ಬೃಹತ್ ಪ್ರಚಾರ ರ್ಯಾಲಿ ದುರಂತದಲ್ಲಿ ಕೊನೆಗೊಂಡಿತು. ಹಠಾತ್ ಜನಸಂದಣಿಯಿಂದಾಗಿ ಕನಿಷ್ಠ 30 ಕ್ಕೂ ಜನರು ಸಾವನ್ನಪ್ಪಿದ್ದಾರೆ.

ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಸ್ಥಳದಲ್ಲಿ ಗದ್ದಲ ಹೆಚ್ಚಾದಾಗ ಸಂಖ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಅಧಿಕಾರಿಗಳು ನಿಖರವಾದ ಅಂಕಿಅಂಶಗಳನ್ನು ನೀಡಲು ವಿಫಲರಾಗಿದ್ದಾರೆ. ಈ ಘಟನೆ ಕರೂರ್ – ಈರೋಡ್ ಹೆದ್ದಾರಿಯಲ್ಲಿರುವ ವೇಲುಸಾಮಿಪುರಂನಲ್ಲಿ ಸಂಭವಿಸಿದೆ. ವಿಜಯ್ ಅವರ ಪ್ರಚಾರ ಸಭೆಗಾಗಿ ಸಾವಿರಾರು ಜನರು ಜಮಾಯಿಸಿದ್ದರು. ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗದ್ದಲ ಭುಗಿಲೆದ್ದಿದೆ. ಹಾಗಾಗಿ ಅವರು ತಮ್ಮ ಭಾಷಣವನ್ನು ನಿಲ್ಲಿಸಬೇಕಾಯಿತು.

ವಿಜಯ್ ಅವರನ್ನು ನೋಡಲು ಉತ್ಸುಕರಾಗಿದ್ದ ಜನಸಮೂಹದ ದೊಡ್ಡ ಭಾಗವು ವೇದಿಕೆಯ ಬ್ಯಾರಿಕೇಡ್‌ಗಳ ಕಡೆಗೆ ನುಗ್ಗಿದ್ದಾರೆ. ಉಸಿರುಗಟ್ಟಿಸುವ ನೂಕುನುಗ್ಗಲಿನಲ್ಲಿ ಹಲವಾರು ಜನರು ಮೂರ್ಛೆ ಹೋದರು. ಸ್ವಯಂಸೇವಕರು ಮತ್ತು ಪೊಲೀಸರು ಮಧ್ಯಪ್ರವೇಶಿಸುವ ಮೊದಲೇ ಅನೇಕರನ್ನು ತುಳಿದುಹಾಕಲಾಯಿತು.

ಸುಮಾರು 30,000 ಭಾಗವಹಿಸುವವರಿಗೆ ಅನುಮತಿ ನೀಡಲಾಗಿದ್ದರೂ, ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು 60,000 ಜನ ಭಾಗಿಯಾಗಿದ್ರು ಅನ್ನೋದು ಈಗ ವರದಿಯಾಗಿದೆ. ಸದ್ಯದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಮತ್ತು ಗಾಯಾಳುಗಳಿಗೆ ₹ 50,000 ಪರಿಹಾರ ನೀಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss