Beauty tips:
ಮಹಿಳೆಯರು ಮೇಕಪ್ ಮತ್ತು ಚರ್ಮದ ಆರೈಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆಯ ಸೌಂದರ್ಯವು ನೀವು ತೆಗೆದುಕೊಳ್ಳುವ ಆರೈಕೆ ಮತ್ತು ಆಹಾರ ಪದ್ಧತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇನ್ನೊಂದು ಮುಖ್ಯವಾದ ವಿಷಯವೆಂದರೆ ಮೇಕ್ಅಪ್ ಮಾಡುವಾಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಮಹಿಳೆಯರು ಮೇಕಪ್ ಟಿಪ್ಸ್ ಗಾಗಿ ಇಂಟರ್ನೆಟ್ ನಲ್ಲಿ ಹುಡುಕುತ್ತಾರೆ.
ಪರಿಪೂರ್ಣ ಲುಕ್ ಪಡೆಯಲು ಮೇಕಪ್ ಸಲಹೆಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಪ್ರಯೋಜನಕಾರಿ ಯಾಗಿದೆ. ಫೌಂಡೇಶನ್, ಕನ್ಸೀಲರ್, ಐ ಶ್ಯಾಡೋಪ್ಯಾಲೆಟ್ ನಿಂದ ಹಿಡಿದು ಹಲವು ರೀತಿಯ ಉತ್ಪನ್ನಗಳಿವೆ. ಅವುಗಳನ್ನು ಬಳಸಲು ಕೆಲವು ಟಿಪ್ಸ್ ಗಳನ್ನು ತಿಳಿದುಕೊಳ್ಳುವುದರಿಂದ ಮುಖವು ಹೆಚ್ಚು ಸುಂದರವಾಗಿ ಕಾಣಬಹುದು ಎಂಬುದನ್ನು ನೆನಪಿಡಿ. ಇದಲ್ಲದೆ ಕೆಲವು ಸಲಹೆಗಳು ಮತ್ತು ಟಿಪ್ಸ್ ಗಳನ್ನು ಅನ್ವಯಿಸಿದ ನಂತರ ನೀವು ವ್ಯತ್ಯಾಸವನ್ನು ಗಮನಿಸಬಹುದು. ಇದಲ್ಲದೆ ನೀವು ಪರಿಪೂರ್ಣ ಲುಕ್ ಅನ್ನು ಪಡೆಯುತ್ತೀರಿ. ಹಾಗಾದರೆ ಯಾವ ಸಲಹೆಗಳನ್ನು ಅನುಸರಿಸಬೇಕೆಂದು ತಿಳಿದುಕೊಳ್ಳೋಣ .
ಸರಿಯಾದ ಮೇಕಪ್ ಪರಿಪೂರ್ಣ ನೋಟವನ್ನು ನೀಡುತ್ತದೆ. ಇಡೀಮುಖ ತಾಜಾ ಮತ್ತು ಸುಂದರವಾಗಿ ಕಾಣುತ್ತದೆ. ನೀವು ಕಪ್ಪುಕಲೆಗಳು, ಕಪ್ಪುವಲಯಗಳು ಇತ್ಯಾದಿಗಳನ್ನು ಹೊಂದಿದ್ದರೆ ನೀವು ಅವುಗಳನ್ನು ಕಾಣಿಸದಂತೆ ಮರೆಮಾಡಬಹುದು. ಆದರೆ ಕನ್ಸೀಲರ್ ಅನ್ನು ಆಯ್ಕೆಮಾಡುವಾಗ ನೀವು ಜಾಗರೂಕರಾಗಿರಬೇಕು. ನಿಮ್ಮ ಸ್ಕಿನ್ ಟೋನ್ ಗೆ ಹೊಂದಿಕೆಯಾಗುವ ಕನ್ಸೀಲರ್ ಅನ್ನು ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್ ಕವರ್ ಹಾಗುತ್ತದೆ .
ಮುಖಕ್ಕೆ ಫೌಂಡೇಶನ್ ಹಚ್ಚುವಾಗ ಹೆಚ್ಚು ಜಾಗರೂಕರಾಗಿರಿ. ಏಕೆಂದರೆ ಫೌಂಡೇಶನ್ ಎನ್ನುವುದು ನಿಮಗೆ ಬೇಕಾದ ಪರಿಪೂರ್ಣವಾದ ಲುಕ್ ಅನ್ನು ಕೊಡುತ್ತದೆ. ನಿಮ್ಮ ಅಂಗೈಯಲ್ಲಿ ಸ್ವಲ್ಪ ಪ್ರಮಾಣದ ಫೌಂಡೇಶನ್ ಅನ್ನು ತೆಗೆದುಕೊಂಡು ಅದನ್ನು ನೀವು ದಿನನಿತ್ಯ ಉಪಯೋಗಿಸುವ ಕ್ರೀಮ್ ಜೋತೆ ಮಿಶ್ರಣ ಮಾಡಿ. ಮಿಶ್ರಣ ಮಾಡಿದ ಮಿಕ್ಸರ್ ಅನ್ನು ಬ್ರಷ್ ಮತ್ತು ಸ್ಪಾಂಜ್ ಸಹಾಯದಿಂದ ನಿಮ್ಮ ಮುಖದ ಮೇಲೆ ಅನ್ವಯಿಸಬೇಕು. ಮೇಕಪ್ ಮಾಡಲು ನಿಮಗೆ ಹೆಚ್ಚು ಸಮಯವಿಲ್ಲದಿದ್ದರೆ, ಬಹಳ ಕಡಿಮೆ ಪ್ರಮಾಣದ ಕನ್ಸೀಲರ್ ಅನ್ನು ತೆಗೆದುಕೊಂಡು ಅದನ್ನು ಬ್ರಷ್ ಸಹಾಯದಿಂದ ಕಣ್ಣುಗಳ ಕೆಳಗೆ, ಮೂಗು ಮತ್ತು ಬಾಯಿಯ ಬಳಿ ಅನ್ವಯಿಸಿ. ಆದರೆ ಈ ಪ್ರಕ್ರಿಯೆಯು ಬಹಳ ಬೇಗನೆ ಪೂರ್ಣಗೊಳ್ಳುತ್ತದೆ.
ಮೇಕಪ್ ಮಾಡಿಕೊಳ್ಳುವವರು ಯಾವಾಗಲೂ ಸರಿಯಾದ ಕ್ರಮವನ್ನು ಅನುಸರಿಸಬೇಕು. ಇದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ನಿಮ್ಮ ಮೇಕ್ಅಪ್ ಮುಗಿಯುವಷ್ಟರಲ್ಲಿ ಒಳ್ಳೆಯ ಫಿನಿಶಿಂಗ್ ಬರಬೇಕು ಎಂದು ಗಮನದಲ್ಲಿಟ್ಟುಕೊಳ್ಳಬೇಕು. ಮೇಕ್ಅಪ್ ಸಂಪೂರ್ಣ ಲಕ್ ಪಡೆಯಲು ಸ್ವಲ್ಪ ಕಷ್ಟ. ಸೌಂದರ್ಯ ವೃತ್ತಿಪರರು ಮೇಕ್ಅಪ್ ಮಾಡುವಾಗ ಮೊದಲು ಕಣ್ಣುಗಳು ಮತ್ತು ಹುಬ್ಬುಗಳಿಂದ ಪ್ರಾರಂಭಿಸುತ್ತಾರೆ. ಆದರೆ ಫೌಂಡೇಶನ್ ಇಂದ ಪ್ರಾರಂಭಿಸುವುದು ಸಹ ಒಳ್ಳೆಯದು. ಫೌಂಡೇಶನ್, ಕನ್ಸೀಲರ್ ಮತ್ತು ಕೊನೆಯದಾಗಿ ಪೌಡರ್ ಉಪಯೋಗಿಸಿ. ಈ ರೀತಿಯಲ್ಲಿಯೂ ನೀವು ಪರ್ಫೆಕ್ಟ್ ಲುಕ್ ಅನ್ನು ಪಡೆದುಕೊಳ್ಳ ಬಹುದು ಎಂಬುದನ್ನು ನೆನಪಿಡಿ.
ಮಲ್ಟಿ ಯೂಸ್ ಮೇಕಪ್ ಅನ್ನು ಪ್ರಯತ್ನಿಸಿ:
ಮಲ್ಟಿ ಯೂಸ್ ಬಳಕೆಯ ಮೇಕಪ್ ಉತ್ಪನ್ನಗಳು ಮತ್ತು ಮೇಕಪ್ ಸ್ಟಿಕ್‌ಗಳಂತಹ ಉತ್ಪನ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಕೆಲವು ಉತ್ಪನ್ನಗಳನ್ನು ಖರೀದಿಸಿದರೆ ಸಾಕು. ಎಲ್ಲವನ್ನೂ ಖರೀದಿಸುವ ಅಗತ್ಯವಿಲ್ಲ. ಜೊತೆಗೆ ಇದು ಸಾಕಷ್ಟು ಸಮಯವನ್ನು ಉಳಿಸುತ್ತದೆ. ನೀವು ಅಂತಹ ಉತ್ಪನ್ನಗಳನ್ನು ನಿಮ್ಮ ಬೆರಳುಗಳೊಂದಿಗೆ ಬೆರೆಸಬಹುದು ಮತ್ತು ಕಡಿಮೆ ಸಮಯದಲ್ಲಿ ಸುಲಭವಾಗಿ ಮುಖದ ಮೇಕಪ್ ಮಾಡಬಹುದು. ಪ್ರಯಾಣಿಸುವ ವೇಳೆ ,ಮಲ್ಟಿ ಯೂಸ್ ಮೇಕ್ಅಪ್ ಖಂಡಿತವಾಗಿ ಅವಶ್ಯಕವಾಗಿದೆ. ಏಕೆಂದರೆ ಎಲ್ಲಾ ರೀತಿಯ ಮೇಕಪ್ ಉತ್ಪನ್ನಗಳನ್ನು ತೆಗೆದು ಕೊಂಡು ಹೋಗುವ ಕೆಲಸ ವಿರುವುದಿಲ್ಲ.ಹೆಚ್ಚಿನ ಜನರು ಸಂಪೂರ್ಣ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಕಣ್ಣಿನ ಮೇಕಪ್ ಸ್ವಲ್ಪ ಕಷ್ಟಕರವಾಗಿರುತ್ತದೆ. ಅಂತಹವರಿಗೆ ನೆರವಾಗಲು ಹಲವಾರು ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಬಳಸಲು ಸುಲಭ ಮತ್ತು ಉತ್ತಮ ನೋಟವನ್ನು ನೀಡುತ್ತದೆ.
ಲೈಟ್ ಆಗಿ:
ಪ್ರತಿದಿನ, ಮೇಕ್ಅಪ್ ಧರಿಸುವವರು ನಿಮ್ಮ ಮೇಕ್ಅಪ್ ಅನ್ನು ಲೈಟ್ ಹಾಗಿ ಮಾಡಿಕೊಳ್ಳಿ, ಏಕೆಂದರೆ ಹೆವಿ ಮೇಕ್ಅಪ್ ಲುಕ್ ದಿನಗಲೂ ಸೆಟ್ ಹಾಗುವುದಿಲ್ಲ. ಸಭೆಗಳು ಮತ್ತು ಕಚೇರಿಗಳಿಗೆ ಹಾಜರಾಗುವವರು ಪರಿಪೂರ್ಣವಾದ ಮೇಕ್ಅಪ್ ಲುಕ್ ಅನ್ನು ಪಡೆಯಲು ಈ ಸಲಹೆಗಳು ಮತ್ತು ಟ್ರಿಕ್ಸ್ ಅನ್ನು ಅನುಸರಿಸಬೇಕು. ಕ್ಯಾಟ್ ಐ ಪರಿಪೂರ್ಣವಾದ ಕಣ್ಣಿನ ಮೇಕ್ಅಪ್, ಕೆನ್ನೆಗಳನ್ನು ಕಂಠೋರ್ ಮಾಡಿದರೆ ನಿಮ್ಮ ಮೇಕ್ಅಪ್ ಪ್ರೊಫಿಷನಲ್ ಹಾಗಿ ಕಾಣುತ್ತದೆ. ಆದರೆ ನೀವು ಅಂತಹ ನೋಟವನ್ನು ಸಾಧಿಸಲು ಬಯಸಿದರೆ, ಹೆಚ್ಚು ಬಳಸಿದ ಮೇಕಪ್ ಉತ್ಪನ್ನಗಳ ಜೊತೆಗೆ ಇವುಗಳನ್ನು ಸೇರಿಸಿ.
ಟಿಂಟೆಡ್ ಮಾಯಿಶ್ಚರೈಸರ್, ಸ್ಪಾಟ್ ಕನ್ಸೀಲರ್ ನಂತಹ ಉತ್ಪನ್ನಗಳನ್ನು ಪ್ರಯತ್ನಿಸಬೇಕು. ಐ ಮೇಕ್ಅಪ್ ಗಾಗಿ ಫೀಲ್ಡ್ ಇನ್ ಬ್ರೌನ್ ಸಾಫ್ಟ್ ಬ್ರೌನ್ ಐ ಶಾಡೋ ತರಹದ್ದು ತುಂಬಾ ಅವಶ್ಯಕ,ಚಿಕ್ಸ್ ಹಾಗೂ ಲಿಪ್ಸ್ ಗೆ ಕ್ರೀಮ್ ಬ್ಲಶ್ ಕಲರ್ ಉಪಯೋಗಿಸಿದರೆ ಇನಷ್ಟು ಲುಕ್ ನೀಡುತ್ತದೆ. ಇದು ತುಂಬಾ ಲೈಟ್ ಮೇಕ್ಅಪ್ ಲುಕ್ ಅನ್ನು ನೀಡುತ್ತದೆ. ಅಲ್ಲದೆ ಇನ್ನು ಹೆಚ್ಚು ಸುಂದರವಾಗಿರುತ್ತದೆ. ದಿನವೂ ಆಫೀಸ್ ಗೆ ಹೋಗುವವರಿಗೆ ಇದು ಬೆಸ್ಟ್ ಮೇಕಪ್ ಎಂದೇ ಹೇಳಬಹುದು. ಆದ್ದರಿಂದ ಖಂಡಿತವಾಗಿ ಇದನ್ನು ಪ್ರಯತ್ನಿಸಿ ಮತ್ತು ಉತ್ತಮ ಮೇಕ್ಅಪ್ ಲುಕ್ ಅನ್ನು ಪಡೆಯಿರಿ.
ಚಳಿಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯು ಮೃದುವಾಗಿರುತ್ತದೆ..!
ನೀವು ಟಿಫಿನ್ ಗೆ ಇಡ್ಲಿ,ದೋಸೆ, ವಡೆ ತಿನ್ನುತ್ತಿದ್ದೀರಾ..? ಆದರೆ ಆ ರೋಗ ಖಂಡಿತ ಬರಬಹುದು..!