Thursday, December 12, 2024

Latest Posts

ಆಮ್ ಆದ್ಮಿ ಪಕ್ಷದ ಮೈಸೂರು ಘಟಕದ ಅಧ್ಯಕ್ಷರಾಗಿ ಮಾಲವಿಕ ಗುಬ್ಬಿವಾಣಿ ನೇಮಕ

- Advertisement -

www.karnatakatv.net : ಆದ್ಮಿ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮಾಲವಿಕ ಗುಬ್ಬಿವಾಣಿ ಅವರನ್ನು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇನ್ಫೊಸಿಸ್ ಸಂಸ್ಥೆಯಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಪರ್ಯಾಯ ರಾಜಕಾರಣದ ಭಾಗವಾಗುವ ಸಲುವಾಗಿ ತಮ್ಮ ಸುತ್ತಲಿನ ಜನ ಸಾಮಾನ್ಯರ ಸಮಸ್ಯೆಗಳ ನಿವಾರಣೆಯ ಗುರಿ ಇಟ್ಟುಕೊಂಡು ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಜನಪರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿರಿಸಿದರು.

2014 ರಲ್ಲಿ ಅಧಿಕೃತವಾಗಿ ಪಕ್ಷ ಸೇರಿದ ನಂತರ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು “ಭ್ರಷ್ಟಾಚಾರ ತೊಲಗಿಸಿ” ಹೋರಾಟ, ಕನ್ನಡ ಪರ ಚಳವಳಿ, ಪರಿಸರ ಉಳಿಸಿ ಅಭಿಯಾನದ ಮೂಲಕ ಮುಂಚೂಣಿಗೆ ಬಂದರು.

ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಗಿರುವ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಆದ ಮಾಲವಿಕಾ ಅವರು ಕಂಪ್ಯೂಟರ್‌ ಸೈನ್ಸ್ ಪದವೀಧರೆ. ಬಹುಮುಖಿ ಪ್ರತಿಭೆಯಾದ ಇವರು ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ್ತಿ ಹಾಗೂ ರಾಷ್ಟ್ರ ಮಟ್ಟದ ಟೇಕ್ವಾಂಡೋ ಸಮರ ಕಲೆಯಲ್ಲಿ ಚಿನ್ನದ ಪದಕ ಗೆದ್ದಿರುವ ಹೆಗ್ಗಳಿಕೆ ಇವರದು.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss