OTT ನಲ್ಲಿ ಮಲಯಾಳಂ ಬ್ಲಾಕ್‌ಬಸ್ಟರ್ ಚಿತ್ರ ಬಿಡುಗಡೆ !

ಪ್ರತಿ ವಾರ ಒಟಿಟಿಗೆ ಹೊಸ ಹೊಸ ಸಿನಿಮಾಗಳು ಬರುತ್ತಲೇ ಇರುತ್ತವೆ. ಮೂಲ ಭಾಷೆ ಯಾವುದೇ ಆಗಿರಲಿ ಅದು, ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿರುವುದರಿಂದ ಆ ಸಿನಿಮಾಗಳು ಹೆಚ್ಚು ಜನರನ್ನು ತಲುಪುತ್ತವೆ. ಇದೇ ಕಾರಣದಿಂದ ಮಲಯಾಳಂ ಸಿನಿಮಾಗಳು ಕನ್ನಡಿಗರನ್ನು ಹೆಚ್ಚು ತಲುಪುತ್ತಿವೆ.

ಮೋಹನ್‌ಲಾಲ್ ಅಭಿನಯದ ಸೂಪರ್ ಹಿಟ್ ಮಲಯಾಳಂ ಸಿನಿಮಾ ಹೃದಯಪೂರ್ವಂ ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಜಿಯೋ ಸಿನಿಮಾಸ್‌ನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಾಗಲಿದೆ. ಸಿನಿಮಾ ರಿಲೀಸ್ ಬಗ್ಗೆ ಜಿಯೋ ಹಾಟ್​ಸ್ಟಾರ್ ಸಿನಿಮಾ ಮಾಹಿತಿ ನೀಡಿದೆ. ಸೆಪ್ಟೆಂಬರ್ 26ರಂದು ಈ ಚಿತ್ರ ಬಿಡುಗಡೆ ಕಾಣಲಿದೆ.

ಅದೇ ರೀತಿ ಮೋಹನ್​ಲಾಲ್ ನಟನೆಯ ‘ಹೃದಯಪೂರ್ವಂ’ ಸಿನಿಮಾ ಥಿಯೇಟರ್​ನಲ್ಲಿ ಯಶಸ್ಸು ಕಂಡಿತು ಮತ್ತು ಈಗ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ಈ ಚಿತ್ರದ ಬಗ್ಗೆ ಒಟಿಟಿ ವೀಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಥಿಯೇಟರ್​​ನಲ್ಲಿ ಸಿನಿಮಾನ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

‘ಹೃದಯಪೂರ್ವಂ’ ಸಿನಿಮಾ ರಿಲೀಸ್ ಬಗ್ಗೆ ಜಿಯೋ ಹಾಟ್​ಸ್ಟಾರ್ ಸಿನಿಮಾ ಮಾಹಿತಿ ನೀಡಿದೆ. ಸೆಪ್ಟೆಂಬರ್ 26ರಂದು ಈ ಚಿತ್ರ ಬಿಡುಗಡೆ ಕಾಣಲಿದೆ. ಮಲಯಾಳಂ, ತೆಲುಗು, ಹಿಂದಿ, ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ಲಭ್ಯವಾಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author