Malayalam News: ಮಲಯಾಳಂನ ನಟ ಬಾಲ ಕುಮಾರ್ ಮತ್ತು ಅವರ ಮ್ಯಾನೇಜರ್ ರಾಜೇಶ್ ಅವರನ್ನು ಎರ್ನಾಕುಲಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಟ ಬಾಲ ಕುಮಾರ್ ಅವರು ಪತ್ನಿ ಮತ್ತು ತಮ್ಮ 12 ವರ್ಷದ ಮಗಳಿಗೆ ಕಿರುಕುಳ ನೀಡುತ್ತಿರುವ, ಬೈಯ್ಯುವ ವೀಡಿಯೋವನ್ನು, ಬಾಲ ಅವರ ಪತ್ನಿ ಅಮೃತಾ ಅವರು ಪೊಲೀಸರಿಗೆ ಒದಗಿಸಿ, ದೂರು ದಾಖಲಿಸಿದ್ದಾರೆ. ಈಗಾಗಲೇ ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನ ನಿಯಮದ ಪ್ರಕಾರ, ಒಬ್ಬರಿಗೊಬ್ಬರು ತೊಂದರೆ ಕೊಡುವಂತಿಲ್ಲ. ಆದರೆ ಬಾಲಕುಮಾರ್ ಅವರು ತಮಗೆ ಪದೇ ಪದೇ ಡಿಸ್ಟರ್ಬ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ವೀಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಸಂದರ್ಶನದಲ್ಲಿ ತಮ್ಮ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆಂದು ಪತ್ನಿ ಅಮೃತಾ ಆರೋಪಿಸಿದ್ದಾರೆ.
ಇತ್ತ ಬಾಲಕುಮಾರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಪತ್ನಿ ಅಮೃತಾ ತಮ್ಮ ಮಗಳನ್ನು ಭೇಟಿಯಾಗಲು ಬಿಡುತ್ತಿಲ್ಲವೆಂದು ಆರೋಪಿಸಿದ್ದರು. ಇನ್ನು ಅಮೃತಾ ಅವರ ಬೆಂಬಲಕ್ಕೆ ನಿಂತಿರುವ ಅವರ ಕಾರ್ ಚಾಲಕ ಕೂಡ, ನಟ ಬಾಲ ಕುಮಾರ್ ವಿರುದ್ಧ ಹೇಳಿಕೆ ನೀಡಿದ್ದಾನೆ. ಹೀಗಾಗಿ ಸಾಕ್ಷಿ ಸಮೇತ ಆರೋಪ ಮಾಡಿರುವ ಕಾರಣಕ್ಕೆ ಬಾಲಕುಮಾರ್ ಮತ್ತು ಅವರ ಮ್ಯಾನೇಜರ್ ರಾಜೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.