ಮಲೇಷ್ಯಾದ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದ್ದು, 8 ಜನ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಅನುಮಾನವಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 03:00ರ ಸುಮಾರಿಗೆ ರಾಜಧಾನಿ ಕೌಲಾಲಂಪುರ್‌ನ ಉತ್ತರದಲ್ಲಿರುವ ಗುಡ್ಡಗಾಡು ಜೆಂಟಿಂಗ್ ಹೈಲ್ಯಾಂಡ್ಸ್‌ನ ಹೊರಗೆ ಭೂಕುಸಿತ ಸಂಭವಿಸಿದೆ. ಸಮಾಧಿಯಾಗಿರುವ ಜನರನ್ನು ರಕ್ಷಿಸಲು ಅಗ್ನಿಶಾಮಕದಳ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘೋಷಿತ ಅಪರಾಧಿಗಳ ಮಾಹಿತಿ ಕೊಟ್ಟರೆ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ
ಇದುವರೆಗೆ 31 ಜನರನ್ನು ರಕ್ಷಿಸಲಾಗಿದೆ ಎಂದು ಮಲೇಷ್ಯಾದ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಆದರೆ ಇನ್ನೂ 51 ಮಂದಿ ನಾಪತ್ತೆಯಾಗಿದ್ದಾರೆ. ಭೂಕುಸಿತವು ಕ್ಯಾಂಪ್‌ಸೈಟ್‌ಗಿಂತ ಸುಮಾರು 30 ಮೀ ಎತ್ತರದ ಇಳಿಜಾರಿನಲ್ಲಿ ಪ್ರಾರಂಭವಾಯಿತು ಮತ್ತು ಸುತ್ತಮುತ್ತಲಿನ ಒಂದು ಎಕರೆ ಭೂಮಿಗೆ ಪರಿಣಾಮ ಬೀರಿದೆ. ಭೂಕುಸಿತಕ್ಕೆ ಕಾರಣವೇನು ಎಂಬುದು ಅಸ್ಪಷ್ಟವಾಗಿದೆ.