Sunday, October 5, 2025

Latest Posts

ಗಂಗವ್ವನಂತೆ ಧೂಳೆಬ್ಬಿಸ್ತಾರಾ ಮಲ್ಲಮ್ಮ?

- Advertisement -

ಎಲ್ಲಾ ಭಾಷೆಯ ಬಿಗ್‌ಬಾಸ್‌ ಸೀಸನ್‌ಗಳಲ್ಲಿ, ಗ್ರಾಮೀಣ ಪ್ರತಿಭೆಗಳ ಹವಾ ಶುರುವಾಗಿದೆ. ಬರೀ ಸ್ಟಾರ್‌ಗಳನ್ನೇ ಕರೆಸ್ತಾರೆ ಅನ್ನೋ ಆರೋಪಗಳ ಮಧ್ಯೆ, ಹಳ್ಳಿ ಸೊಗಡಿಗೂ ಆದ್ಯತೆ ಕೊಡಲಾಗ್ತಿದೆ. ಕೃಷಿ ಕೆಲಸ, ಕೂಲಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮಹಿಳೆಯರು, ಯೂಟ್ಯೂಬರ್‌ಗಳಾಗಿ ಇದೀಗ ಬಿಗ್‌ ಮನೆಗೂ ಕಾಲಿಟ್ಟಿದ್ದಾರೆ.

ತೆಲುಗಿನ ಗಂಗವ್ವ ಭಾರತೀಯ ಯೂಟ್ಯೂಬರ್‌. ಮೈ ವಿಲೇಜ್‌ ಶೋನಲ್ಲಿ. ಗ್ರಾಮೀಣ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡ್ತಾರೆ. ಕೂಲಿ ಕಾರ್ಮಿಕರಾಗಿರುವ ಗಂಗವ್ವ ಅದ್ಭುತ ವಾಕ್ಪಟು. ತೆಲಂಗಾಣ ರಾಜ್ಯದ ಜಗ್ತಿಯಾಲ್ ಜಿಲ್ಲೆಯ ಲಂಬಾಡಿಪಲ್ಲಿ ಗ್ರಾಮದವರು. 2016ರಲ್ಲಿ ಯೂಟ್ಯೂಬರ್‌ ಆಗಿ ಗುರುತಿಸಿಕೊಂಡ ಬಳಿಕ, ನಟನಾ ಜಗತ್ತಿಗೆ ಕಾಲಿಟ್ಟಿದ್ರು. ಮಲ್ಲೇಶಮ್‌, ಇಸ್ಮಾರ್ಟ್‌ ಶಂಕರ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ರು. 2020ರಲ್ಲಿ ತೆಲಂಗಾಣ ಸರ್ಕಾರದ ವಿಶಿಷ್ಟ ಮಹಿಳಾ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

ಗಂಗವ್ವನಂತೆ ಇದೀಗ ಕನ್ನಡ ಬಿಗ್‌ಬಾಸ್‌ನಲ್ಲಿ ಮಲ್ಲಮ್ಮನ ಹವಾ ಶುರುವಾಗಿದೆ. ಮಲ್ಲಮ್ಮ ಕೂಡ ಸ್ಟಾರ್‌ ಯೂಟ್ಯೂಬರ್.‌ ನೋಡೋರಿಕೆ ಮುಗ್ದರಂತೆ ಕಾಣಿಸಿದ್ರೂ, ಒಳಗೆ ಸೂಪರ್‌ ಪವರ್‌ ಇಟ್ಟುಕೊಂಡಿದ್ದಾರೆ. ಮಲ್ಲಮ್ಮ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನವರು. ಹಾಸ್ಯ, ನಗುವಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಫೇಮಸ್ ಆಗಿದ್ದಾರೆ.

ಮಲ್ಲಮ್ಮ ಟಾಕ್ಸ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ, 1 ಲಕ್ಷದ 74 ಸಾವಿರ ಫಾಲೋವರ್ಸ್, ಯೂಟ್ಯೂಬ್‌ನಲ್ಲಿ 16 ಸಾವಿರ ಸಬ್‌ಸ್ಕ್ರೈಬರ್ಸ್‌ ಹೊಂದಿದ್ದಾರೆ. ಮಲ್ಲಮ್ಮ ಕೂಡ ಹಳ್ಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಡಿಯೋಗಳಿಗೇ ಫೇಮಸ್‌. ಒಟ್ನಲ್ಲಿ ತೆಲುಗಿನಲ್ಲಿ ಗಂಗವ್ವ ಹವಾ ಸೃಷ್ಟಿಸಿದ್ರು. ಈಗ ಮಲ್ಲಮ್ಮನ ಸರದಿ. ಬಿಗ್‌ ಮನೆಯಲ್ಲಿ ಹೇಗೆ ಆಟ ಆಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

- Advertisement -

Latest Posts

Don't Miss