ಬಿಗ್ ಬಾಸ್ ಕನ್ನಡ ಸೀಸನ್ 12 ಗಾಗಿ ಎಲ್ಲರು ಕಾತುರದಿಂದ ಕಾಯ್ತಾಯಿದ್ರು.
ಆದ್ರೆ ಸೆಪ್ಟೆಂಬರ್ ೨೮ ಕ್ಕೆ ಕಿಚ್ಚ ಸುದೀಪ್ ಅವರ ಹೊಸ್ಟ್ ಅಲ್ಲಿ ಶೋ ಶುರುವಾಗಿದೆ. 19 ಕಂಟೆಸ್ಟೆಂಟ್ ಗಳು ಒಂಟಿ – ಜಂಟಿಗಳಾಗಿ ಈಗಾಗಲೇ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ಒಂದು ದಿನವೂ ಕಳೆದಿಲ್ಲ. ಶೋ ಮೊದಲ ದಿನವೇ ಸ್ಫೋಟಕ ಶಾಕ್ ನೀಡಿದೆ. ಒಂದಲ್ಲಾ ಎರೆಡೆರೆಡು ಶಾಕ್ ನೀಡಿದೆ.
ಮೊದಲನೆಯದಾಗಿ ಸ್ಪರ್ಧಿಗಳಿಗೆ ಮೊದಲ ದಿನವೇ ಎಲಿಮಿನೇಷನ್ ಶಾಕ್ ಕೊಟ್ಟಿದ್ದಾರೆ. ಈ ತೀರ್ಮಾನ ಎಲ್ಲರನ್ನ ಆಶ್ಚರ್ಯಚಕಿತರನ್ನಾಗಿಸಿದೆ. ಆರಂಭದಲ್ಲಿ, ಸ್ಪಂದನಾ ಸೋಮಣ್ಣ, ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ತಕ್ಷಣ ನಾಮಿನೇಟ್ ಆದಿದ್ದಾರೆ. ಬಿಗ್‌ಬಾಸ್ ಅವರ ಸೂಚನೆಯಂತೆ ಸ್ಪರ್ಧಿಗಳು ಒಮ್ಮತದಿಂದ ಯಾರಿಗೆ ಮನೆಯಿಂದ ಹೊರಹೋಗಬೇಕೆಂದು ನಿರ್ಧರಿಸಬೇಕು. ಮೊದಲ ದಿನವೇ ಯಾರಾದರೂ ಒಬ್ಬರು ದೊಡ್ಮನೆಯಿಂದ ವಿದಾಯ ಹೇಳಬೇಕಾಗಿದೆ. ಪ್ರೇಕ್ಷಕರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.
ಇನ್ನು ಮಲ್ಲಮ್ಮನ ಯಡವಟ್ಟು ಮನೆಯವರ ಹೊಟ್ಟೆಗೆ ತಣ್ಣೀರು ಬಟ್ಟೆ ಅನ್ನೋಹಾಗಾಗಿದೆ. ಕಾರಣ ಮನೆ ಪಡೆಯುವ ದಿನಸಿ ಸಾಮಗ್ರಿಗಳ ಆಯ್ಕೆ ಒಂಟಿಯವರದ್ದೇ ಆಗಿರತ್ತೆ. ಅದರಂತೆ ಆಯ್ಕೆಗಾಗಿ ನಂತರ ಮಲ್ಲಮ್ಮ ಅವರು ಬರ್ತಾರೆ. ಬಿಗ್ ಬಾಸ್ ಸೂಚಿಸಿದಂತೆ ಮಲ್ಲಮ್ಮ ಕ್ರಾಸ್ ಗುರುತಿನ ಮೇಲೆ ನಿಲ್ಲಬೇಕು. ನಂತರ ಬಿಗ್ ಬಾಸ್ ಮನೇಲಿ ಟೇಬಲ್ ಮೇಲೆ ಇತ್ತಿರುವಂತಹ ಬುಟ್ಟಿಗಳನ್ನ ಆಯ್ಕೆ ಮಾಡಬೇಕು.
ಅದರಲ್ಲಿ ಮನೆಗೆ ಬೇಕಾದಂತಹ ದಿನಸಿಗಳು ಇರತ್ತೆ. ಬಳಿಕ ಅವರು ಆಯ್ಕೆ ಮಾಡಿದ ಇಡೀ ಬುಟ್ಟಿಯನ್ನೇ ಬೇರೆ ಟೇಬಲ್ ಮೇಲೆ ಇಡಬೇಕು. ಆದ್ರೆ ಮಲ್ಲಮ್ಮ ಅವರು ಅವರು ಆಯ್ಕೆ ಮಾಡಿದ ಬುಟ್ಟಿಯನ್ನ ಟೇಬಲ್ ಮೇಲೆ ಇಡದೆ ಯಡವಟ್ಟನ್ನ ಮಾಡಿಕೊಂಡಿದ್ದಾರೆ. ಮನೆ ಯಾವುದೇ ದಿನಸಿ ಸಾಮಗ್ರಿಗಳನ್ನ ಪಡೆಯುವುದಿಲ್ಲ ಅಂತ ಬಿಗ್ ಬಾಸ್ ನೇರವಾಗಿ ಅನೌನ್ಸ್ ಕೂಡ ಮಾಡಿದ್ದಾರೆ.
ಹಾಗಾಗಿ ಈ ವಾರ ಮನೆ ಸ್ಪರ್ಧಿಗಳಿಗೆ ದಿನಸಿ ಸಾಮಗ್ರಿಗಳು ಸಿಗೋದು ಕಷ್ಟ ಅನ್ನಿಸುತ್ತಿದೆ. ಆದ್ರೂ ಕೂಡ ಸ್ಪರ್ಧಿಗಳಿಗೆ ದಿನಸಿ ಸಾಮಗ್ರಿಗಳು ಸಿಗತ್ತಾ ಅಥವಾ ಸಿಗೋದಿಲ್ಲವಾ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ