ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಬಣ ಬಡಿದಾಟಕ್ಕೆ ಅಂತಿಮ ತೆರೆ ಬೀಳುವ ಹಂತ ತಲುಪಿಲ್ಲ. ರಾಜ್ಯದಲ್ಲಿ ಎರಡೂ ಪ್ರಮುಖ ಹುದ್ದೆಗಳ ಬದಲಾವಣೆಯ ವಿಚಾದಲ್ಲಿ ಬಣ ರಾಜಕೀಯ ಜೋರಾಗಿದೆ. ಹಾಲಿ ಸಿಎಂ ಸಿದ್ದರಾಮಯ್ಗ ಅವರನ್ನು ಕೆಳಗಿಳಿಸಬೇಕು.
ಬದಲಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಲು ಒಂದು ಬಣ ಸಿದ್ದವಾಗಿದೆ. ಇನ್ನೂ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಲ್ಲಿಯೇ ಮುಂದುವರೆಯಬೇಕು. ಹೀಗೆಂದು ಮತ್ತೊಂದು ಬಣದ ಪಟ್ಟಾಗಿದೆ.
ಇನ್ನೂ ಈ ನಡುವೆಯೇ ಡಿಕೆ ಶಿವಕುಮಾರ್ ಬಣದಲ್ಲಿ ಕೆಲ ನಾಯಕರು ಗುರುತಿಸಿಕೊಂಡಿದ್ದಾರೆ. ಅಲ್ಲದೆ ಸಿದ್ದು ನಿಷ್ಠ ಸಚಿವರ ವಿರುದ್ಧ ಹೈಕಮಾಂಡ್‌ಗೆ ದೂರನ್ನೂ ಸಹ ನೀಡಿದ್ದಾರೆ. ಈ ಬಗ್ಗೆ ಅನೇಕ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ ಇದೇ ವಿಚಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಆಪ್ತ ಮಂತ್ರಿಗೆ ವಾರ್ನ್ ಮಾಡಿದ್ರಾ? ಎನ್ನುವ ಪ್ರಶ್ನೆ ಮೂಡುತ್ತಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ಸಿದ್ದು ಬಣ ಸಾಧನಾ ಸಮಾವೇಶದ ಹೆಸರಿನಲ್ಲಿ ಶಕ್ತಿ ಪ್ರದರ್ಶನ ಮಾಡಿತ್ತು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಖರ್ಗೆ ವೇದಿಕೆಯ ಮೇಲೆ ಮಾತನಾಡುವಾಗ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸಿದ್ದರಾಮಯ್ಯ ಅವರಿಗೆ ಪಿಸು ಮಾತಿನಲ್ಲಿ ಏನನ್ನೋ ಹೇಳುತ್ತಿದ್ದರು.
ಇದನ್ನೂ ಓದಿ : ಅಜ್ಞಾನ, ಅತ್ಮವಂಚನೆ, ದುರಹಂಕಾರ : ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ..
ಇದನ್ನು ಗಮನಿಸಿದ್ದ ಖರ್ಗೆ “ಏ ಮಹದೇವಪ್ಪ, ನೀವು ಸಿದ್ದರಾಮಯ್ಯ ಅವರ ಕಿವಿ ತುಂಬಬೇಡ. ಅವರ ಕಿವಿ ಸರಿಯಾಗಿದೆಯೇ. ಇಲ್ಲಿ ಸ್ವಲ್ಪ ಕೇಳಿಲ್ಲಿ” ಎಂದು ಗದರಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡಿದ್ದ ಇಬ್ಬರೂ ನಾಯಕರು ನಸು ನಕ್ಕು ಸೈಲೆಂಟಾಗಿದ್ದರು. ಬಳಿಕ ಖರ್ಗೆ ಅವರು ತಮ್ಮ ಮಾತುಗಳನ್ನು ಮುಂದುರೆಸಿದ್ದರು.
ಆದರೆ ಸದ್ಯದ ರಾಜಕೀಯದಲ್ಲಿ ಮಲ್ಲಿಕಾರ್ಜನ ಖರ್ಗೆ ಆಡಿರುವ ಮಾತಿನ ಸುತ್ತ ಹಲವು ಚರ್ಚೆಗಳು ಹುಟ್ಟಿಕೊಂಡಿವೆ. ಡಿಕೆಶಿ ಬಣದ ದೂರಿನ ಮೇರೆಗೆ ಎಚ್ಚರಿಕೆ ರೂಪದಲ್ಲಿ ಹಾಗೆ ಹೇಳಿದ್ರಾ? ಅಥವಾ ಉದ್ದೇಶ ಪೂರ್ವಕವಾಗಿಯೇ ಮಾತನಾಡಿದ್ರಾ? ಎನ್ನುವ ಪ್ರಶ್ನೆ ಸದ್ದು ಮಾಡುತ್ತಿದೆ.
ಇನ್ನೂ ಪ್ರಮುಖವಾಗಿ ಸಚಿವ ಮಹದೇವಪ್ಪ ಸದಾ ಸಿದ್ದರಾಮಯ್ಯ ಪರವಾಗಿದ್ದಾರೆ. ನಾಯಕತ್ವ ಬದಲಾವಣೆಯ ವಿಚಾರದಲ್ಲಿಯೂ ಸಿಎಂ ಅವರನ್ನು ಬಿಟ್ಟು ಕೊಟ್ಟಿಲ್ಲ. ಕ್ಲೀಯರ್ ಆಗಿಯೇ ಸಿದ್ದರಾಮಯ್ಯ ಮುಂದುವರೆಯಬೇಕೆಂದು ಹೇಳಿದ್ದಾರೆ.
ತಮ್ಮ ನೆಚ್ಚಿನ ನಾಯಕನ ಪರ ಗಟ್ಟಿ ಧ್ವನಿಯಲ್ಲಿ ನಿಲುವನ್ನು ಹೊರಹಾಕುತ್ತಾರೆ. ಅಲ್ಲದೆ ಮಹದೇವಪ್ಪ ಅವರ ಈ ನಡೆ ಡಿಕೆ ಬಣದ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಈ ಎಲ್ಲ ವಿಚಾರಗಳ ಕಾರಣಕ್ಖಾಗಿ ಕಿವಿ ತುಂಬಬೇಡ ಎಂದು ಮಾರ್ಮಿಕವಾಗಿ ಕ್ಲಾಸ್ ತಗೊಂಡಿದ್ದಾರೆ ಎನ್ನಲಾಗುತ್ತಿದೆ.