Tuesday, October 14, 2025

Latest Posts

ರಾಜ್ಯ ಕಾಂಗ್ರೆಸ್ಸಿಗರಿಗೆ ‘ನವೆಂಬರ್’ ಲಕ್ಷ್ಮಣ ರೇಖೆ

- Advertisement -

ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ. ಮತ್ತೊಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೆಚ್ಚಿದೆ. ಇದರ ಜೊತೆಗೆ ಪ್ರಭಾವಿ ಸಚಿವರು ಒಬ್ಬರಿಗೆ ಒಂದೇ ಹುದ್ದೆ ಸಾಕು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ.

ದೆಹಲಿಯಲ್ಲಿ ಕುಳಿತು ವಿರೋಧಿ ಬಣಕ್ಕೆ, ಸಿದ್ದರಾಮಯ್ಯ ಚೆಕ್ ಮೇಟ್ ಇಡುವ ಕೆಲಸ ಮಾಡಿದ್ರು. ಇದ್ರಿಂದ ಡಿಕೆಶಿಗೆ ಮತ್ತು ಅವರ ಬಣಕ್ಕೆ ತಾತ್ಕಾಲಿಕವಾದ ಹಿನ್ನಡೆ ಆಗಿರೋದು ನಿಜ. ರಾಜ್ಯದಲ್ಲಿ ಸಿದ್ದು ಬಣ ಆ್ಯಕ್ಟೀವ್ ಆಗಿದ್ದು, ವಿರೋಧಿಗಳನ್ನು ಕಟ್ಟಿಹಾಕಲು ರಣತಂತ್ರ ಎಣೆದಿದ್ದಾರೆ.

ಅಹಿಂದ ಸಮುದಾಯದ ಎಲ್ಲಾ ಸಚಿವರು ಸೇರಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಕೆಲವು ಸಚಿವರಿಗೆ ಎರಡಕ್ಕಿಂತ ಹೆಚ್ಚು ಹುದ್ದೆಗಳನ್ನು ನೀಡಲಾಗಿದೆ. ಒಬ್ಬರಿಗೆ ಒಂದು ಹುದ್ದೆ ಅನ್ನುವ ನಿಯಮ ಅನಷ್ಠಾನಕ್ಕೆ ತನ್ನಿ ಅಂತಾ ಆಗ್ರಹಿಸಿದ್ದಾರೆ.

ಎಂಎಲ್​ಸಿ ನೇಮಕದಲ್ಲೂ ತಮ್ಮ ಸಮುದಾಯಕ್ಕೆ ಮಣೆ ಹಾಕುವಂತೆ, ಸತೀಶ್ ಜಾರಕಿಹೊಳಿ, ಜಿ. ಪರಮೇಶ್ವರ್, ಜಮೀರ್ ಅಹಮದ್, ಮಹದೇವಪ್ಪ ಲಾಬಿ ಮಾಡಿದ್ದಾರೆ. ಆದ್ರೆ ಇದಕ್ಕೆಲ್ಲಾ ಮಣಿಯದ ಮಲ್ಲಿಕಾರ್ಜುನ ಖರ್ಗೆ, ನವೆಂಬರ್ ತನಕ ಯಾರೂ ಮಾತನಾಡಬೇಡಿ. ಬಳಿಕ ನೋಡೋಣ ಅಂತಾ ಖಡಕ್ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸದ್ಯಕ್ಕಂತೂ ಇಲ್ಲ. ಕರ್ನಾಟಕದಲ್ಲಿ ಚುನಾವಣೆ ಆಗಿ ಎರಡೂವರೆ ವರ್ಷವಾಗಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕವಾದ್ರೂ ನಿಮ್ಮ ಅಭಿಪ್ರಾಯ ಹೇಳಬೇಕಿತ್ತು. ಇಷ್ಟು ದಿನ ಏಕೆ ಬರಲಿಲ್ಲ. ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇರುವಾಗ ಬದಲಾವಣೆ ಕಷ್ಟ. ದೆಹಲಿಯಲ್ಲಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಅಂತಾ ಹೇಳಿದ್ದಾರೆ.

ಎಂಎಲ್​ಸಿ ಪಟ್ಟಿಗೂ ಅಂತಿಮ ಮುದ್ರೆ ಹಾಕಲಾಗಿದೆ. ಈಗ ಬದಲಾವಣೆ ಅಸಾಧ್ಯ. ಮುಂದಿನ ಬಾರಿ ನೋಡೋಣ ಎಂದಿದ್ದಾರೆ. ಬೆಂಬಲಿಗರ ಪರ ಸಚಿವರ ಲಾಬಿಗೆ ಮಣಿಯದೇ ವಾರ್ನಿಂಗ್ ಕೊಟ್ಟು ಕಳಿಸಿದ್ದಾರೆ.

2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವೇಳೆ, ಇದೇ ರೀತಿಯ ಬೆಳವಣಿಗೆಗಳು ಆಗಿದ್ವು. ಆಗಲೂ ಕೂಡ ಸಿದ್ದು ಬಣವೇ ಪ್ರಮುಖ ದಾಳ ಉರುಳಿಸಿತ್ತು. ಈಗ ಡಿಕೆಶಿ ವಿಚಾರದಲ್ಲೂ ಅದೇ ರೀತಿ ಆಗ್ತಿದೆ.

- Advertisement -

Latest Posts

Don't Miss