Friday, July 25, 2025

Latest Posts

ಮಾಲೂರಲ್ಲಿ ಬಿಜೆಪಿ ಬಣ ಬಡಿದಾಟ ಹೂಡಿ ವಿಜಯ್ ವರ್ಸಸ್ ಮಂಜುನಾಥ್ ಗೌಡ

- Advertisement -

political news

ಮಾಲೂರು :
ಎಲೆಕ್ಷನ್ ಸಮೀಪಿಸ್ತಿದ್ದಂತೆ ಟಿಕೆಟ್ ಫೈಟ್ ಜೋರಾಗಿ ನಡೀತಿದೆ. ಅದ್ರಲ್ಲೂ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಫೈಟಿಂಗ್ ನಡೆದಿದೆ. ಮಾಲೂರಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಎರಡು ಬಣಗಳ ನಡುವೆ ಬಡಿದಾಟ-ಹೊಡೆದಾಟ ನಡೆದಿದೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪೂರ್ವ ಭಾವಿ ಸಭೆ ಕರೆಯಲಾಗಿತ್ತು. ಸಭೆಗೆ ಬಂದಿದ್ದ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಬೆಂಬಲಿಗರ ನಡುವೆ ಗಲಾಟೆ ಆಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್ ಮುಂದೆಯೇ ಕಿತ್ತಾಟ ನಡೆದಿದೆ. ಜಿಲ್ಲಾಧ್ಯಕ್ಷ ಭಾಷಣದ ವೇಳೆ ಮಾಲೂರಿನಲ್ಲಿ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಕೇಳಿದ್ದಕ್ಕೆ , ಹೂಡಿ ವಿಜಯ್ ಕುಮಾರ್ ಹಾಗೂ ಮಂಜುನಾಥ್ ಗೌಡ ಬೆಂಬಲಿಗರ ನಡುವೆ ಗಲಾಟೆ ಆಗಿದೆ. ಈ ವೇಳೆ ಎರಡು ಬಣದ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಕರ್ನಾಟಕ ಬಂದ್- ಕಾಂಗ್ರೆಸ್ ಕರೆಗೆ, ಸಿಎಂ ತಿರುಗೇಟು

ಮಡಾಳರನ್ನು ಬಂದಿಸದಿದ್ದಕ್ಕೆ ಕೈ ನಾಯಕರು ಗರಂ

ಬಿಜೆಪಿ ವಿರುದ್ಧ ಕಿಡಿಕಾರಿದ ಎಮ್ ಎಲ್ ಸಿ ಅನಿಲ್ ಕುಮಾರ್..!

- Advertisement -

Latest Posts

Don't Miss