www.karnatakatv.net :ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೊಂದಿಗೆ ಒಟ್ಟಿಗೆ ಕುಳಿತುಕೊಂಡು ವಿದ್ಯಾಭ್ಯಾಸವನ್ನು ಮಾಡುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ.
ಹೌದು , ಅಫ್ಘಾನಿಸ್ತಾನವನ್ನು ತಾಲಿಬಾನ ಆಕ್ರಮಿಸಿದಾಗಿನಿಂದ ಬೇರೆ ಬೇರೆ ಕಾನೂನು ಗಳು ಹೊರಬರಲು ಶುರುವಾಗಿದೆ. ತಾಲಿಬಾನ್ ಇತ್ತೀಚೆಗಷ್ಟೇ ಕಾಬೂಲ್ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಮೊಹಮ್ಮದ್ ಒಸ್ಮಾನ್ ಬಾಬರಿ ಅವರನ್ನು ತೆಗೆದು ಹಾಕಿ, ಮೊಹಮ್ಮದ್ ಅಶ್ರಫ್ ಘೈತರ್ ಅವರನ್ನು ನೇಮಕ ಮಾಡಿತ್ತು.
ಅದೇ ರೀತಿ ಈಗ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಾಗಿ ಪಾಠವನ್ನು ಮಾಡಲು ಸೂಚಿಸಿದೆ. ವಿಶ್ವವಿದ್ಯಾಲಯಗಳಲ್ಲಿ ಲಿಂಗ ಪ್ರತ್ಯೇಕತೆ ಇರುವುದರಿಂದ ನಿಜವಾದ ಇಸ್ಲಾಮಿಕ್ ಮನೋಭಾವ ತನಕ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯಕ್ಕೆ ಬರಬಾರದೆಂದು ತಾಲಿಬಾನ್ ನೇಮಿತ ಕುಲಪತಿ ತಿಳಿಸಿದ್ದಾರೆ.




