Monday, December 11, 2023

Latest Posts

ತನ್ನನ್ನು ಕಡಿದ ಹಾವನ್ನು ಹಿಡಿದು ಕಚ್ಚಿ ತುಂಡರಿಸಿ ಆಸ್ಪತ್ರೆ ಸೇರಿದ ಭೂಪ..!

- Advertisement -

ಉತ್ತರಪ್ರದೇಶ: ತನ್ನನ್ನು ಕಚ್ಚಿದ ಹಾವನ್ನು ಹಿಡಿದು ಹಲ್ಲಿನಿಂದ ಕಚ್ಚಿ ತುಂಡರಿಸಿ ಬಿಸಾಡಿರುವ ವ್ಯಕ್ತಿ ಕೊನೆಗೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಸಾಮಾನ್ಯವಾಗಿ ಹಾವು ಕಡಿತಕೊಳಗಾದವ್ರು ಗಾಬರಿಯಿಂದ ಆಸ್ಪತ್ರೆ ಕಡೆ ಧಾವಿಸೋ ಪ್ರಯತ್ನ ಮಾಡಿದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಹಾವಿನ ಮೇಲಿನ ದ್ವೇಷವನ್ನು ಕ್ಷಣ ಮಾತ್ರದಲ್ಲಿ ತೀರಿಸಿಕೊಂಡಿದ್ದಾನೆ. ಉತ್ತರ ಪ್ರದೇಶದ ಅಸ್ರೌಲಿ ಎಂಬ ಗ್ರಾಮದಲ್ಲಿ ನಿನ್ನಾ ರಾತ್ರಿ ಹಾವು ಮನೆಯೊಂದಕ್ಕೆ ನುಗ್ಗಿ ರಾಜ್ ಕುಮಾರ್ ಎಂಬ ವ್ಯಕ್ತಿಯನ್ನು ಕಚ್ಚಿದೆ. ಇದರಿಂದಾಗಿ ಕುಡಿದ ಅಮಲಿನಲ್ಲಿದ್ದ ಆತ ಕೋಪದಿಂದ ಆ ಹಾವನ್ನು ಹಿಡಿದು ಹಲ್ಲಿನಿಂದ ಕಚ್ಚಿದ್ದಾನೆ. ತಾನೇನು ಮಾಡ್ತಿದ್ದೀನಿ ಅಂತ ಅರಿವೇ ಇಲ್ಲದೆ ಆತ ಕೈಲಿಡಿದಿದ್ದ ಹಾವನ್ನು ತುಂಡುತುಂಡಾಗಿ ಕಚ್ಚಿ ಬಿಸಾಡಿದ್ದಾನೆ.

ಇನ್ನು ಮೊದಲೇ ಹಾವು ಕಡಿತಕ್ಕೊಳಗಾಗಿದ್ದ ರಾಜ್ ಕುಮಾರ್ ಹಾವನ್ನು ಸ್ವತಃ ತಾನೇ ಕಚ್ಚಿದ್ದರಿಂದ ವಿಷದ ಅಂಶ ಅಧಿಕವಾಗಿ ದೇಹ ಸೇರಿದೆ. ತೀವ್ರ ಆಸ್ವಸ್ಥಗೊಂಡಿದ್ದ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು ರಾಜ್ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನೆಡಸುತ್ತಿದ್ದಾನೆ. ಈ ನಡುವೆ ರಾಜ್ ಕುಮಾರ್ ಕಚ್ಚಿ ತುಂಡು ಮಾಡಿದ್ದ ಹಾವನ್ನು ಆತನ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.

- Advertisement -

Latest Posts

Don't Miss