- Advertisement -
Crime News:
ಬೆಂಗಳೂರಿನಲ್ಲಿ ಅನೈತಿಕ ಸಂಬಂಧದ ಅನುಮಾನದಿಂದ ಪತ್ನಿಯನ್ನೇ ಕೊಲೆ ಮಾಡಿರೋ ವಿಚಾರ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧ ಅನುಮಾನದಿಂದ ಪತ್ನಿಯನ್ನು ಕೊಂದಿದ್ದ ಪತಿಯನ್ನು ಕೆ.ಆರ್ ಪುರಂ ಪೊಲೀಸರು ಬಂಧಸಿದ್ದಾರೆ. ಜಾನ್ ಸುಪ್ರಿತ್ (34) ಬಂಧಿತ ಆರೋಪಿ. ನ್ಯಾನ್ಸಿ ಫ್ಲೋರಾ ಕೊಲೆಯಾಗಿದ್ದ ಮಹಿಳೆ. ಶಾಮಿಯಾನ ಬ್ಯುಸಿನೆಸ್ ಮಾಡಿಕೊಂಡಿದ್ದ ಆರೋಪಿ ಪತ್ನಿಯ ಮೇಲೆ ಅನುಮಾನದಿಂದ ಕೆ ಆರ್.ಪುರಂನ ಟಿಸಿ ಪಾಳ್ಯದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದನು ಎಂದು ತಿಳಿದು ಬಂದಿದೆ. ಕೆ.ಆರ್ ಪುರಂ ಪೊಲೀಸ್ ಸ್ಟೇಶನ್ ನಲ್ಲಿ ಪ್ರಕರಣ ದಾಖಲಾಗಿದೆ.
- Advertisement -