ಲಖೀಂಪುರ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್, ಈ ವಿಷಯ ಬಾಲಕನ ಅಣ್ಣನಿಗೆ ತಿಳಿದು. ಆತ ಹುಲಿಯ ಬಾಯಲ್ಲಿದ್ದ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ಉಳಿಸಿದ್ದಾನೆ. ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ ಸುರೇಶ್(22).
ರಾಜಕುಮಾರ್ ಮತ್ತುಸುರೇಶ್ ಕಬ್ಬಿನ ಗದ್ದೆಗೆ ಕೆಲಸಕ್ಕೆಂದು ಬಂದಿದ್ದರು. ಸುರೇಶ್ ಕೆಲಸ ಮಾಡುತ್ತಿದ್ದರೆ, ರಾಜಕುಮಾರ್ ಆಟವಾಡುತ್ತಿದ್ದ. ಆಗ ಹುಲಿ ದಾಳಿ ನಡೆಸಿದೆ. ಅಚಾನಕ್ ಆಗಿ ಅದನ್ನ ಕಂಡ ಸುರೇಶ್, ಹುಲಿಯಿಂದ ತಮ್ಮನನ್ನು ಬಚಾಯಿಸಿದ್ದಾನೆ. ನಂತರ ಇಬ್ಬರೂ ಅಲ್ಲಿಂಜ ಕಾಲ್ಕಿತ್ತಿದ್ದಾರೆ. ಆದ್ರೆ ರಾಜ್‌ಕುಮಾರ್ ಗಂಟಲಿಗೆ ಗಂಭೀರ ಗಾಯವಾಗಿದ್ದು, ತುಂಬಾ ರಕ್ತ ಸೋರುತ್ತಿತ್ತು. ಆಗ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಅವನನ್ನು ದಾಖಲಿಸಲಾಯಿತು. ನಂತರ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಲಕ್‌ನೌನ್ ಪ್ರೈವೇಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈಗಲೂ ಕೂಡ ರಾಜ್‌ಕುಮಾರ್ ಸ್ಥಿತಿ ಗಂಭೀರವಾಗಿದೆ.
ರಾಜ್ ಮತ್ತು ಸುರೇಶ್ ಮಧ್ವಪುರ ಹಳ್ಳಿಯವರಾಗಿದ್ದು, ಇವರ ಅಪ್ಪ ಕೂಲಿ ಕಾರ್ಮಿಕರಾಗಿದ್ದಾರೆ. ಹಾಗಾಗಿ ಚಿಕಿತ್ಸೆ ಖರ್ಚನ್ನ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯವರು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಹುಲಿ ಹೀಗೆ ಕಬ್ಬಿನ ಗದ್ದೆಗೆ ಬಂದಿರುವುದಕ್ಕೆ ಅರಣ್ಯ ಇಲಾಖೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕಬ್ಬಿನ ಗದ್ದೆಯ ಅಕ್ಕ ಪಕ್ಕದ ಏರಿಯಾದಲ್ಲಿರುವ ಜನರಿಗೂ ಈ ಬಗ್ಗೆ ಹೆದರಿಕೆ ಹುಟ್ಟಿದೆ.