ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯದಲ್ಲಿ ನಿನ್ನೆಯ ರಾತ್ರಿ ಗುಂಡಿನ ಸದ್ದು ಕೇಳಿ ಬಂದಿದೆ. ಸುಳ್ಯ ಸಮೀಪದ ವೆಂಕಟರಮಣ ಸೊಸೈಟಿಯ ಸಮೀಪ ವ್ಯಕ್ತಿಯೊಬ್ಬರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರೋದಾಗಿ ತಿಳಿದು ಬಂದಿದೆ. ಆದ್ರೇ ಅಪರಿಚಿತರ ಗುಂಡು, ಗುರಿ ತಪ್ಪಿದ ಪರಿಣಾಮ, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಸಭಾ ಗ್ರಾಮದ ಜಯನಗರ ನಿವಾಸಿ ಮಹಮ್ಮದ್ ಸಾಯಿ ಎಂಬುವರ ಮೇಲೆ, ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಹತ್ತಿರದ ವೆಂಕಟರಮಣ ಕೋ ಆಪರೇಟಿವ್ ಸೊಸೈಟ್ ಬಳಿಯ ಕಾರು ನಿಲ್ಲಿಸಿ, ತಮ್ಮ ತಂಗಿಯ ಮನೆಗೆ ತೆರಳಿದ್ದಾರೆ.
ತಂಗಿಯ ಮನೆಯಿಂದ ಹೊರ ಬಂದು, ಮಹಮ್ಮದ್ ತಮ್ಮ ಕಾರು ಏರುವ ಸಂದರ್ಭದಲ್ಲಿ, ಸ್ಕಾರ್ಫಿಯೋ ವಾಹನದಲ್ಲಿ ಬಂದಂತ ಅಪರಿಚಿತರು, ಗುಂಡಿನ ದಾಳಿ ನಡೆಸಿದ್ದಾರೆ. ಅಪರಿಚಿತರು ಹಾರಿಸಿದಂತ ಗುಂಡು, ಗುರಿ ತಪ್ಪಿ ಕಾರಿನ ಡೋರ್ ಗೆ ತಗುಲಿದೆ. ಅಲ್ಲಿಂದ ಗುಂಡಿನ ಚಿಲ್ಡ್ ಹಾರಿ ಬಂದ ಪರಿಣಾಮ, ಮಹಮ್ಮದ್ ಸಾಯಿ ಅವರ ಹೊಟ್ಟೆಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ. ಸುಳ್ಯ ಸರ್ಕಾರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.