ಬೆಂಗಳೂರು: ನಗರ ಪ್ರಸಿದ್ಧ ಶಾಪಿಂಗ್ ರಸ್ತೆಯಾಗಿರುವಂತ ಬ್ರಿಗೇಡ್ ರಸ್ತೆಯಲ್ಲಿರುವಂತ ಶಾಪಿಂಗ್ ಮಾಲ್ ಒಂದರ ಮೇಲಿನಿಂದ ಕೆಳಗೆ ಜಿಗಿದು, ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ.
ಬ್ರಿಗೇಡ್ ರಸ್ತೆಯಲ್ಲಿನ ಶಾಪಿಂಗ್ ಕಾಂಪ್ಲೆಕ್ಸೆ ಒಂದಕ್ಕೆ ಶಾಪಿಂಗ್ ಗಾಗಿ ಬಂದಿದ್ದಂತ ಯುವಕ-ಯುವತಿ, ಮಹಡಿಯ ಮೇಲೆ ಹತ್ತಿ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರನ್ನು ಕೂಡಲೇ ನಿಮ್ಹಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೀಗ ಆತ್ಮಹತ್ಯೆಗೆ ಯತ್ನಿಸಿದಂತ ಯುವಕ-ಯುವತಿಯರ ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.




