ಮಂಡ್ಯ: ನಾಳೆ ಅಂಬಿ-ಅಪ್ಪು ಅರಮನೆಯ ಪುತ್ಥಳಿ ಅನಾವರಣ ನಡೆಯಲಿದೆ. ಮದ್ದೂರು ತಾಲ್ಲೂಕಿನ ಡಿ.ಹೊಸೂರು.ಗ್ರಾಮದಲ್ಲಿ ಅಂಬಿ-ಅಪ್ಪು ಅರಮನೆ ನಿರ್ಮಾಣವಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುತ್ಥಳಿ ನಿರ್ಮಾಣ ಮಾಡಿದ್ದು, ಒಂದೇ ಗುಡಿಯಲ್ಲಿ ಇಬ್ಬರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರಿಂದ ಅಂಬಿ-ಅಪ್ಪು ಮೇಲೆ ವಿಶೇಷ ಅಭಿಮಾನ ಮಾಡಲಾಗುತ್ತಿದೆ.
ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯಿದೆ ರೂಪಿಸಬೇಕು : ಪ್ರಮೋದ್ ಮುತಾಲಿಕ್
ರೆಬಲ್ & ಪವರ್ ಸ್ಟಾರ್ ಅಭಿಮಾನಿಗಳ ಬಳಗದಿಂದ ಗುಡಿ ನಿರ್ಮಾಣವಾಗುತ್ತಿದೆ. ಸುಮಾರು 12 ಲಕ್ಷ ವೆಚ್ಚದ ಪುತ್ಥಳಿ ನಿರ್ಮಾಣಕ್ಕೆ ನಾಳೆ ಅನಾವರಣಗೊಳಿಸಲಾಗುವುದು. ಅಂಬಿ-ಅಪ್ಪು ಪುತ್ಥಳಿಯನ್ನು ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅನಾವರಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನಟ ದರ್ಶನ್, ಅಭಿಷೇಕ್ ಅಂಬರೀಶ್,ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಸೇರಿ ಹಲವರು ಭಾಗಿಯಾಗುವ ಸಾಧ್ಯತೆಯಿದೆ.
ಮೈಸೂರು ಉಗ್ರರ ಪಾಲಿಗೆ ಸ್ಲೀಪಿಂಗ್ ಸೆಲ್ ಆಗುತ್ತಿದೆ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್