- Advertisement -
ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಂದ ಇಡೀ ಪ್ರಪಂಚವೇ ಲಾಕ್ ಆಗಿ ಹೋಗಿದೆ.. ಮನೆಯಿಂದ ಹೊರಬರೋದೆ ಕಷ್ಟವಾಗಿದೆ. ಆದ್ರೆ, ದೂರದೂರಿಂದ ತರಬೇಕಾದದ ವಸ್ತುಗಳು ಸಿಗದೆ ಜನ ಕಂಗಾಲಾಗಿದ್ದಾರೆ.. ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ಬಾಲಕಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಬೆಂಗಳೂರಿನಿಂದ ಮಾತ್ರೆ ತರಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರ ಜೊತೆ ಮಾತ್ರೆ ಕೊಳ್ಳಲು ಅಗತ್ಯ ಹಣವಿಲ್ಲದ ಸಂಕಷ್ಟಕ್ಕೆ ಸಿಲುಕಿದ್ರು. ನಂತರ ಹೊಸಹಳ್ಳಿ ನಾಗೇಶ್ ಅನ್ನೋರ ಮೂಲಕ ವಿಜಯೇಂದ್ರ ಅವರಿಗೆ ಕರೆ ಮಾಡಿ ಔಷಧಿ ನೆರವು ಕೇಳಿದ್ದಾರೆ. ತಕ್ಷಣ ಸ್ಪಂದಿಸಿದ ವಿಜಯೇಂದ್ರ ಯಡಿಯೂರಪ್ಪ ಬೆಂಬಲಿಗರ ಮೂಲಕ ಔಷಧಿಯನ್ನ ತರಿಸಿ ಬಾಲಕಿ ಮನೆ ಬಾಗಿಲಿಗೆ ವಿತರಿಸಿದ್ದಾರೆ.. ಸಿಎಂ ಪುತ್ರನ ಸಹಾಯಕ್ಕೆ ಬಾಲಕಿ ಕುಟುಂಬ ಧನ್ಯವಾದ ತಿಳಿಸಿದೆ..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ
- Advertisement -