Mandya News:
ಸಿ ಎಂ ಬಂದು ಹೋದ ಒಂದು ತಿಂಗಳ ಬಳಿಕ ಸರ್ಕಾರಿ ಕಾಲೇಜು ಮಂಡ್ಯ ಕ್ರೀಡಾಂಗಣವನ್ನ ಮತ್ತೆ ಪುನರ್ ನಿರ್ಮಾಣ ಮಾಡುತ್ತಿರುವ ಕಾಲೇಜು ಆಡಳಿತ ಮಂಡಳಿ ಹಾಗು ನಗರಸಭೆ. ಕಳೆದ ತಿಂಗಳು ಸಂಜೀವಿನಿ ಜೀವನೋಪಾಯ ಇಲಾಖೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ .ಮಂಡ್ಯ ಜಿಲ್ಲಾ ವಸ್ತುವಾರಿ ಸಚಿವರು ಕೆ ಗೋಪಾಲಯ್ಯ ಕ್ರೀಡಾ ಸಚಿವರು ನಾರಾಯಣ ಗೌಡ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇನ್ನು ಸಿಎಂ ಆಗಮಿಸುವ ಹಿನ್ನಲೆಯಲ್ಲಿ ಕಾಲೇಜು ಕ್ರೀಡಾಂಗಣವನ್ನ ದುರಸ್ತಿ ಮಾಡಿ ಸಭೆ ಹಾಗೂ ಸ್ಟೇಜ್ ಗೆ ಅವಕಾಶ ಮಾಡಿಕೊಡಲಾಗಿತ್ತು ಕಳೆದ ಒಂದು ತಿಂಗಳಿಂದ ಸುರಿದಂತ ಧಾರಾಕಾರ ಮಳೆಯಿಂದ ಪುನರ್ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ ಮಳೆ ಕೊಂಚ ನಿಂತ ಕಾರಣ ಕ್ರೀಡಾಂಗಣ ವನ್ನ ಮತ್ತೆ ಪುನರ್ ನಿರ್ಮಾಣ ಮಾಡುತ್ತಿರುವ ಕಾಲೇಜು ಆಡಳಿತ ಮಂಡಳಿ ಹಾಗೂ ನಗರ ಸಭೆ. ಇನ್ನು ಸ್ಥಳಕ್ಕೆ ಆಗಮಿಸಿ ನಗರ ಸಭೆ ಅಧ್ಯಕ್ಷ ಮಂಜು ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿದರು.