ನಿತ್ಯವೂ ಅನ್ನದಾಸೋಹವೇ ದಂಪತಿಯ ಕಾಯಕ..!

ಮಂಡ್ಯ : ಲಾಕ್ ಡೌನ್ ನಿಂದ ಕಂಗೆಟ್ಟವರಿಗೆ ಹೃದಯವಂತ ಜನ ಸಾಧ್ಯವಾದಷ್ಟು ಸಹಾಯ ಮಾಡ್ತಿದ್ದಾರೆ..  ದೇವರೂ ಎಲ್ಲಾ ಐಶ್ವರ್ಯ ಕೊಟ್ಟಿದ್ರೂ ಬಹುತೇಕ ಸಿರಿವಂತ ಜನ ದಾನಧರ್ಮ ಮಾಡೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ, ಈ ದಂಪತಿಗಳು ನೂರಾರು ಕೋಟಿ ಆಸ್ತಿ ಮಾಡಿದವರಲ್ಲ.. ಆದ್ರೆ, ಸಾವಿರಾರು ಹಸಿದ ಜನರ ಆಶೀರ್ವಾದ ಇವರಿಗಿ ಸಿಕ್ಕಿದೆ. ದುಡಿಮೆಯಿಲ್ಲದೆ ಊಟಕ್ಕಾಗಿ ಪರದಾಡುವ ಜನರ ಪಾಲಿಗೆ ಈ ದಂಪತಿ ಸಾಕ್ಷಾತ್ ಅನ್ನಪೂರ್ಣೆಯಾಗಿದ್ದಾರೆ..

ಲಾಕ್ ಡೌನ್ ಘೋಷಣೆಯಾದ ಮೊದಲ ದಿನದಿಂದಲೂ ಈ ದಂಪತಿ ನಿತ್ಯವೂ ಸಾವಿರಾರು ಜನರಿಗೆ ಊಟ ಹಾಕ್ತಿದ್ದಾರೆ.. ಮದ್ದೂರಿನ ಪುರಸಭಾ ಸದಸ್ಯರಾದ ಪ್ರಿಯಾಂಕಾ ಅಪ್ಪುಗೌಡ ಹಾಗೂ ಅವರ ಪತಿ ಅಪ್ಪುಗೌಡ ಕಳೆದ ಮಾರ್ಚ್ 24 ನೇ ತಾರೀಖಿನಿಂದ ಇದುವರೆಗೂ 15 ಸಾವಿರಕ್ಕೂ ಅಧಿಕ ಜನರ ಹಸಿವು ನೀಗಿಸಿದ್ದಾರೆ.. ಮದ್ದೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಕೂಲಿಕಾರ್ಮಿಕರು, ದಿನಗೂಲಿ ನೌಕರರು ಸೇರಿದಂತೆ ಹಸಿದವರಿಗೆ ಈ ದಂಪತಿ ಅನ್ನ ಹಾಕ್ತಿದ್ದಾರೆ.. ಕೇವಲ ತಮ್ಮ ವಾರ್ಡ್ ಗೆ ಸೀಮಿತವಾಗದೆ ಇತರ ಪುರಸಭಾ ಸದಸ್ಯರ ಸಹಕಾರದೊಂದಿಗೆ ಸಂಪೂರ್ಣ ಮದ್ದೂರಿನಲ್ಲಿ ಹಸಿದವರಿಗೆ ಊಟ ಹಾಕ್ತಿದ್ದಾರೆ.

10-15 ಸ್ವಯಂ ಸೇವಕರು ಮುಂಜಾನೆಯಿಂದ ಸಂಜೆ ವರೆಗೂ 3 ಬಾರಿ ಅಡುಗೆ ಮಾಡ್ತಾರೆ. ಇಲ್ಲಿ ನಿತ್ಯವೂ ದಾಸೋಹ ಮಾಡ್ತಿರುವುದನ್ನ ತಿಳಿದ ಜನ ಬಂದು ಊಟ ಮಾಡಿ ಹೋಗ್ತಾರೆ..ಅಪ್ಪುಗೌಡ ದಂಪತಿ ಯಾವುದೇ ಬೇಸರವಿಲ್ಲದೆ ಊಟವನ್ನ ಬಡಿಸ್ತಾರೆ.. ಇಷ್ಟೆ ಅಲ್ಲ.. ಮದ್ದೂರು ಪಟ್ಟಣದ ಗಲ್ಲಿಗಲ್ಲಿಯನ್ನಅಲೆದು ಮುಚ್ಚಿದ  ಅಂಗಡಿಗಳು, ಅರಳಿಕಟ್ಟೆ ಮೇಲೆ, ಬಸ್ ನಿಲ್ದಾಣ ಬಳಿ ಕುಳಿತವರಿಗೆ ಊಟ ಮಾಡಿದ್ರಾ ಅಂತ ವಿಚಾರಿಸಿ ಕೈಗೆ ಊಟದ ಪ್ಯಾಕೇಟ್ ಕೊಟ್ಟು ಮದ್ದೂರಿನ ಅನ್ನಪೂರ್ಣೆಯಾಗಿದ್ದಾರೆ..  ರಾಜಕಾರಣದ ಶೋಕಿಗೆ ಒಂದೆರಡು ದಿನ ಹತ್ತಾರು ಪ್ಯಾಕೇಟ್ ಊಟ ಕೊಟ್ಟು ಫೋಟೋಗೆ ಫೋಸ್ ನೀಡಿ ಮೂರನೆ ದಿನ ಮನೆ ಸೇರುವ ರಾಜಕಾರಣಿಗಳ ಮಧ್ಯೆ ನಿರಂತರ 25 ದಿನಗಳ ಕಾಲ ಅನ್ನದಾಸೋಹ ಮುಂದುವರೆಸಿಕೊಂದು ಬಂದಿರುವ ಈ ದಂಪತಿಯ ಕಾರ್ಯಕ್ಕೆ ಹ್ಯಾಟ್ಸಫ್ ಹೇಳಲೇಬೇಕು..

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

ಸತ್ಯ, ನೇರ, ನಿಷ್ಠೂರ ಸುದ್ದಿಗಳಿಗಾಗಿ ಕರ್ನಾಟಕ ಟಿವಿ ಯನ್ನ ಫಾಲೋಮಾಡಿ.. ಕರ್ನಾಟಕ ಟಿವಿ. ಇದು ಕನ್ನಡಿಗರ ಧ್ವನಿ

https://www.youtube.com/watch?v=V2KhbSLgWVw&t=2s

About The Author