ಕರ್ನಾಟಕ ಟಿವಿ ಮಂಡ್ಯ ಮೇ 20 : ನಗರದ ಪೇಟೆ ಬೀದಿ ಸೀಲ್ ಡೌನ್ ಆಗಿದ್ದು ಇಲ್ಲಿಗೆ ಡಿಸಿ ಡಾ ವೆಂಕಟೇಶ್ ಭೇಟಿ ನೀಡಿದ್ರು. ಈ ವೇಳೆ ಕಂಟೇನ್ಮೆಂಟ್ ಜೋನ್‍ನಲ್ಲಿ ಕಾನೂನು ಅನುಷ್ಠಾನವಾಗುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಸೀಲ್ ಡೌನ್ ಪ್ರದೇಶ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುತ್ತಿದ್ದಾರಾ ಎಂಬುವುದರ ಬಗ್ಗೆ ತಿಳಿಯಲು ಡ್ರೋನ್ ಮೂಲಕ ಸರ್ವೇ ಮಾಡಲು ಪ್ರಾಯೋಗಿಕ ಚಾಲನೆ ನೀಡಿದ್ರು. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ವಿನೂತನ ರೀತಿಯ ಪ್ರಯೋಗ ಮಾಡ್ತಿದೆ. ಪೊಲೀಸ್ ಇಲಾಖೆ ಮತ್ತು ಖಾಸಗಿ ಕಂಪನಿಯವರ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನ ಮಾಡಿದೆ. ಮುಂದಿನ ದಿನಗಳಲ್ಲಿ ನಮಗೆ ಕೊರೊನಾ ನಿಯಂತ್ರಣ ಮಾಡಲು ಸಾಮಾಜಿಕ ಅಂತರ ಮತ್ತು ಇತರ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಡ್ರೋನ್ ಸರ್ವೆ ಬಹಳ ಅನುಕೂಲ ಎಂದು ಮಂಡ್ಯ ಡಿಸಿ ಡಾ.ವೆಂಕಟೇಶ್ ಹೇಳಿದ್ರು
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ