ಕರ್ನಾಟಕ ಟಿವಿ : ಮಂಡ್ಯ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಓದಿದ್ದು ಎಂಬಿಬಿಎಸ್ ಹೀಗಾಗಿ ಮಂಡ್ಯದಲ್ಲಿ ಕೊರೊನಾ ನಿಗ್ರಹಿಸುವ ದೃಷ್ಟಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ. ಜೊತೆಗೆ ರೈತನ ಮಗ ಕೂಡ ಹೌದು, ಹೀಗಾಗಿ ರೈತರ ಕಷ್ಟಗಳನ್ನೂ ಸಹ ಅರ್ಥ ಮಾಡಿಕೊಂಡಿರುವ ಕಾರಣ ಅನ್ನದಾತರಿಗೂ ನೆರವಾಗ್ತಿದ್ದಾರೆ. ಇಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಮದ್ದೂರಿನ ಹೊರವಲಯದಲ್ಲಿ ತೆಗೆದಿರುವ ಚೆಕ್‌ಪೋಸ್ಟ್ ಬಳಿ ವಾಹನಗಳ ತಪಾಸಣೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.
ನಂತರ ಮದ್ದೂರಿನ ಬೆಕ್ಕಳಲೆ ಗ್ರಾಮದ ರೈತನ ಸೌತೆಕಾಯಿ ತೋಟ ಮಳೆಗೆ ನಾಶವಾಗಿರುವುದನ್ನು ಪರಿಶೀಲಿಸಿ ಯಾವುದೇ ಸಮಯದಲ್ಲೂ ಧೃತಿಗೆಡದಂತೆ ರೈತನಿಗೆ ಆತ್ಮಸ್ಥೈರ್ಯ ತುಂಬಿದ್ರು. ನಂತರ ಜಿಲ್ಲಾಧಿಕಾರಿಗಳು ಮಳೆ ಯಿಂದ ಹಾನಿಯಾಗಿರುವ ಕಾರಣ ಎನ್ ಡಿ ಆರ್ ಎಫ್ ಪರಿಹಾರ ನಿಧಿಯಿಂದ ರೈತರಿಗೆ ಸ್ಥಳದಲ್ಲೇ ಸಹಾಯಧನ ಚೆಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮದ್ದೂರು ತಹಶೀಲ್ದಾರ್ ವಿಜಯಕುಮಾರ್ ಉಪಸ್ಥಿತರಿದ್ದರು.
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ