ಕರ್ನಾಟಕ ಟಿವಿ ಮಂಡ್ಯ : ಮಳವಳ್ಳಿಯಲ್ಲಿ 25 ವರ್ಷದ ಓರ್ವ ವ್ಯಕ್ತಿ ಕೊರೋನಾ ಪಾಸಿಟಿವ್ ಧೃಡವಾಗಿದೆ.. ಈ ವ್ಯಕ್ತಿ ಫೆಬ್ರವರಿ 4 ರಂದು ೭ಜನರ ಜೊತೆ ಇವರು ದೆಹಲಿಯ ತಬ್ಲಿಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದಿ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಮಾಹಿತಿ ನೀಡಿದ್ದಾರೆ.. ಫೆ. ೧೪ರಂದು ಸಂಪರ್ಕ ಕ್ರಾಂತಿ ರೈಲ್ ಮೂಲಕ ಯಶವಂತಪುರಕ್ಕೆ ಬಂದಿದ್ದಾರೆ. ನಂತರ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸ್ಯಾಟಲೈಟ್ ಬಸ್ ನಿಲ್ದಾಣ ಕ್ಕೆ ಬಂದು ಸಾರಿಗೆ ಬಸ್ ಮೂಲಕ ಮದ್ದೂರಿಗೆ ಬಂದಿದ್ದಾರೆ.. ಮದ್ದೂರಿನಿಂದ ಕಾರ್ ಮೂಲಕ ಮಳವಳ್ಳಿಗೆ ಪ್ರಯಾಣ ಮಾಡಿದ್ದಾರೆ.. ಅಲ್ಲದೇ ಲಾಕ್ ಡೌನ್ ಆಗುವವರೆಗೆ ಸ್ಥಳೀಯ ಈದ್ಗಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ ಇದರಿಂದ ಮತ್ತಷ್ಷಟು ಜನಕ್ಕೆ ಸೋಂಕು ಹರಡಿರುವ ಭೀತಿ ಎದುರಾಗಿದೆ.
ಕ್ವಾಂಟೈನಲ್ಲಿ ಇಟ್ಟಿದ್ದ ವ್ಯಕ್ತಿಗೆ ಕೊರೊನಾ ಕನ್ಫರ್ಮ್
ತಬ್ಲಿಗಿ ಸಭೆಯಲ್ಲಿ ಭಾಗಿಯಾದ ೭ಜನರ ಪೈಕಿ ೪ಜನರ ಪಾಸಿಟಿವ್ ವರದಿ ಬಂದ ಬಳಿಕ ಇವರನ್ನ ಹಾಸ್ಟೆಲ್ ನಲ್ಲಿ ಕ್ವಾರಾಂಟೈನ್ ಮಾಡಲಾಗಿತ್ತು.. ಬಳಿಕ ಆಸ್ಪತ್ರೆಯ ಕ್ವಾರಂಟೈನಲ್ಲಿಡಲಾಗಿತ್ತು..
ಇವರ ಗಂಟಲಿನ ದ್ರವದ ಪರೀಕ್ಷೆ ಪುನಾರವರ್ತನೆ ಮಾಡಿದಾಗ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇವರ ಪೈಮರಿ ಕಾಂಟ್ಯಾಕ್ಟ್ ಇಬ್ಬರೂ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗುರ್ತಿಸಿ ಪರೀಕ್ಷೆ ಗೆ ಒಳಪಡಿಸಲಾಗಿದೆ. ಇವರು ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರದ ಕ್ರಮ ದಂತೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.. ಒನ್ನು ಈ ಹಿಂದಿನ ಪಾಸಿಟಿವ್ ಪ್ರಕರಣದ ವ್ಯಕ್ತಿಯ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ಸ್ ಗಳಲ್ಲಿ ೧೩೫ ವರದಿ ಕೂಡ ನೆಗೆಟಿವ್ ಬಂದಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಜಿಲ್ಲಾಧಿಕಾರಿ ಡಿಸಿ ವೆಂಕಟೇಶ್ ಮನವಿ ಮಾಡಿದ್ದಾರೆ..
ಪ್ರವೀಣ್ ಕುಮಾರ್ ಜಿಟಿ ಕರ್ನಾಟಕ ಟಿವಿ, ಮಂಡ್ಯ.