ಮಂಡ್ಯ : ಒಂದೆಡೆ ರೈತ ಸಮುದಾಯಕ್ಕೆ ಕೊರೊನಾ ಕಾಟದಿಂದ ಲಾಕ್ ಡೌನ್ ಸಮಸ್ಯೆಯಾಗಿದ್ರೆ, ಮತ್ತೊಂದೆಡೆ ಮಳವಳ್ಳಿ ರೈತರಿಗೆ ಕಾಡಾನೆಗಳು ಕಾಟ ಕೊಡ್ತಿವೆ.. ಮಂಚನಪುರ ಸಮೀಪದ ಕೂನನಕೊಪ್ಪಲು ಗ್ರಾಮದ ಗೌರಮ್ಮ, ಹಾಗೂ ನಾಗರಾಜು ಎಂಬ ರೈತರಿಗೆ ಸೇರಿದ 2ಎಕ್ಕರೆ ಕಟಾವಿಗೆ ಬಂದಿದ್ದ ಬಾಳೆ, ಒಂದೂವರೆ ಎಕ್ಕರೆ ಮುಸುಕಿನ ಜೋಳದ ಬೆಳೆಗಳನ್ನು ಸುಮಾರು 7-8 ಆನೆಗಳ ಹಿಂಡು ನಾಶ ಪಡಿಸಿವೆ. ರಾತ್ರಿ ಕಾವಲು ಕಾಯಲು ರೈತರು ಸಣ್ಣದೊಂದು ಗುಡಿಸಲನ್ನು ಹಾಕಿ ಅಲ್ಲೇ ಮಲಗಿದ್ದು ಅವರ ಮೇಲೂ ಆನೆಯ ಹಿಂಡು ದಾಳಿಮಾಡಿದ್ದು ಒಂದು ಕಡೆ ಬೆಳೆ ನಾಶಪಡಿಸುವುದನ್ನು ನೋಡಿಯೂ ಅಸಹಾಯಕ ರಾದ ರೈತರಿಗೆ ಪ್ರಾಣ ಉಳಿಸಿಕೊಳ್ಳಲು ದೊಡ್ಡ ಸವಾಲಾಗಿತ್ತು. ರಾತ್ರಿ ಕಾವಲು ಕಾಯಲು ರೈತರು ಸಣ್ಣದೊಂದು ಗುಡಿಸಲನ್ನು ಹಾಕಿ ಅಲ್ಲೇ ಮಲಗಿದ್ದು ಅವರಮೇಲೂ ಆನೆಯ ಹಿಂಡು ದಾಳಿ ಮಾಡಲು ಮುಂದಾದಾಘ ಬಚಾವಾಗಿದ್ದಾರೆ.
ಮಂಚನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ರೈತರಿಗೆ ಮತ್ತೊಂದು ಕಡೆ ಆನೆಯ ದಾಳಿಯಿಂದ ತತ್ತರಿಸಿ ಹೋಗಿದ್ದು ಕೃಷಿ ಚಟುವಟಿಕೆ ಮಾಡುವುದೇ ಕಷ್ಷಟವಾಗಿದೆ.
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ