Tuesday, April 15, 2025

Latest Posts

Empty lake: ರೈತರ ಬೆಳೆ ಜೊತೆ ನೀರಾವರಿ ಅಧಿಕಾರಿಗಳ ಚೆಲ್ಲಾಟ

- Advertisement -

ಮಂಡ್ಯ: ಕೆ.ಆರ್ ಪೇಟೆಯ ದೇವಿರಮ್ಮಣ್ಣಿ ಕೆರೆ ನೀರಿಲ್ಲದೆ ಒಣಗಿ ಖಾಲಿಯಾಗುತ್ತಿದೆ. ಹೇಮಾವತಿ ನದಿ ಮೂಲಕ ನೀರು ಹರಿಸಿ ಕೆರೆ ತುಂಬಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗ್ತಿಲ್ಲ.

ಕೆ.ಆರ್ ಪೇಟೆ ತಾಲೂಕಿನಲ್ಲಿ ಅತ್ಯಂತ ದೊಡ್ಡ ಕೆರೆ ಎಂದೇ ದೇವಿರಮ್ಮಣ್ಣಿಕೆರೆ ಖ್ಯಾತಿ ಪಡೆದಿದೆ. ಹೇಮಾವತಿ ಎಡದಂಡೆ ನಾಲೆಯ ಮೂಲಕ ನೀರು ಹರಿಸಿ, ಕೆರೆ ತುಂಬಿಸಲು ವಿಫಲರಾಗಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಯಂತರು ಹಾಗೂ ಸಹಾಯಕ ಇಂಜಿನಿಯರ್​ಗಳ ನಿರ್ಲಕ್ಷ ಹಾಗೂ ಕರ್ತವ್ಯ ಲೋಪದ ವಿರುದ್ಧ ರೈತರು ಕಿಡಿಕಾರಿದ್ದಾರೆ.
ದೇವಿರಮ್ಮಣ್ಣಿಕೆರೆ ಅಚ್ಚುಕಟ್ಟು ಪ್ರದೇಶ ಸಮಿತಿಯ ಅಧ್ಯಕ್ಷ ಅಗ್ರಹಾರ ಕೃಷ್ಣೇಗೌಡ ನೇತೃತ್ವದಲ್ಲಿ ಕೆರೆಯ ಅಂಗಳಕ್ಕೆ ಇಳಿದು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು..

ಹೇಮಾವತಿ ನದಿಯಿಂದ ಕಾನೂನುಬಾಹಿರವಾಗಿ ಕೃಷ್ಣರಾಜಸಾಗರಕ್ಕೆ ನೀರು ಹರಿಸಿ, ಅಲ್ಲಿಂದ ತಮಿಳುನಾಡಿಗೆ ಅಧಿಕಾರಿಗಳು ನೀರು ಹರಿಸುತ್ತಿದ್ದಾರೆ. ಆದರೆ ಹೇಮಾವತಿ ನದಿ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳನ್ನು ತುಂಬಿಸಲು ಮಾತ್ರ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಒಂದ್ವೇಳೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸೋದಾಗಿ ಕೃಷ್ಣೆಗೌಡ ಎಚ್ಚರಿಕೆ ನೀಡಿದರು..
ವರದಿ :-ರವಿಕುಮಾರ್ ಹುಣಸೂರು

Dr.G.Parameshwar: ಹುಬ್ಬಳ್ಳಿ ಠಾಣೆಗೆ ಗೃಹ ಮಂತ್ರಿಗಳ ದಿಡೀರ್ ಭೇಟಿ..!

Salagar; ಉ.ಕರ್ನಾಟಕವನ್ನು ಬರಪೀಡಿತ ಎಂದು ಘೋಷಿಸಿ : ಶರಣು ಸಲಗರ್

 

Konareddy: ಚಕ್ಕಡಿ ಸರದಾರ ಎಂದು ಬಿರುದು ಪಡೆದುಕೊಂಡ ಶಾಸಕ ಕೋನರೆಡ್ಡಿ..!

- Advertisement -

Latest Posts

Don't Miss