Monday, December 23, 2024

Latest Posts

ಬ್ಯಾಂಕ್ ಅಧಿಕಾರಿಗಳಿಗೆ ಮಾಜಿ ಸಚಿವ ಪುಟ್ಟರಾಜು ಎಚ್ಚರಿಕೆ..

- Advertisement -

ಕರ್ನಾಟಕ ಟಿವಿ ಮಂಡ್ಯ : ಬ್ಯಾಂಕ್ ಅಧಿಕಾರಿಗಳಿಂದ ರೈತರಿಗೆ ಅನ್ಯಾಯವಾಗ್ತಿದೆ ಎಂದು ಮಾಜಿ ಸಚಿವ ಸಿ,ಎಸ್ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದ್ರು.  ನಿನ್ನೆ ಸಂಜೆ ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಕೊರೋನಾ ಪ್ರಗತಿ ಪರಿಶೀಲನಾ ಸಭೆ ನಡೀತು.. ಸಭೆಯಲ್ಲಿ ಭಾಗಿಯಾದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಜಿ ಸಚಿವ ಸಿಎಸ್ ಪುಟ್ಟರಾಜು ಬ್ಯಾಂಕ್ ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಹಾಗೂ ಪಿಂಚಣಿ ಖಾತೆಗೆ ಹಣ ವರ್ಗಾವಣೆ ಮಾಡಲು ವಿಳಂಬ ಮಾಡುತ್ತಿರುವ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಿ ಅಧಿಕಾರಿಗಳಿಗೆ ಇನ್ನು ಮುಂದೆ ನೀವು ಇದನ್ನು ಸರಿಪಡಿಸಿಕೊಳ್ಳದಿದ್ದರೆ   ಮುಂದಿನ ದಿನಗಳಲ್ಲಿ ನಿಮಗೆ ಜನಗಳೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವರಾದ  ಕೆ.ಸಿ ನಾರಾಯಣಗೌಡರಿಗೆ ಶಾಸಕ ಪುಟ್ಟರಾಜು ಶುಭಕೋರಿದ್ರು.  ಈ ಒಂದು ಸಂಕಷ್ಟ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದ ಎಲ್ಲ ಶಾಸಕರು ನಿಮ್ಮ ಜೊತೆ ಕೈಜೋಡಿಸಿ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳೊಂದಿಗೆ ಕೆಲಸ ನಿರ್ವಹಿಸಲು ನಾವು ಸಿದ್ಧರಿರುತ್ತೇವೆ ಎಂದು ಹೇಳುತ್ತಾ ನಾರಾಯಣ ಗೌಡರಿಗೆ ಶುಭಾಶಯ ಕೋರಿದರು.

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ, ಟಿವಿ, ಮಂಡ್ಯ

https://www.youtube.com/watch?v=6qvoao5ONoU
- Advertisement -

Latest Posts

Don't Miss